ಉಡುಪಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅಪರಿಚಿತ ವೃದ್ದರೊಬ್ಬರು ಖಾಸಗಿಯವರ ಸ್ಥಳದಲ್ಲಿದ್ದ ಗಿಡಗಂಟಿಗಳಿಗೆ ಬೆಂಕಿ ಹಚ್ಚಿರುವ ಘಟನೆಯು ನಗರದ ಬೈಲಕೆರೆ ಗೋವಿಂದ ಪುಷ್ಕರಣಿ ರಸ್ತೆ ಬಳಿ ನಡೆದಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ, ದೊಡ್ಡ ಪ್ರಮಾಣದಲ್ಲಿ ಸಂಭವಿಸದಾದ ಅಗ್ನಿದುರಂತವನ್ನು ತಪ್ಪಿಸಿದ್ದಾರೆ.
ಸಮಾಜಸೇವಕ ನಿತ್ಯಾನಂದ ಒಳಕಾಡುವರು ವೃದ್ಧರನ್ನು ಪೋಲಿಸರ ಸಹಕಾರದಿಂದ ದೊಡ್ಡಣಗುಡ್ಡೆಯ ಡಾ ಎ ವಿ ಬಾಳಿಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿದರು.
ಮುಖ್ಯಆರಕ್ಷಕ ಹರೀಶ್ ಮಾಳ ಅವರು ವೃದ್ಧರ ವಿಳಾಸ ಪತ್ತೆಗೊಳಿಸಿ ಸಂಬಂಧದಿಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದರು. ಮಾಜಿ ನಗರಸಭಾ ಸದಸ್ಯ ಗಿರೀಶ್ ಅಂಚನ್ ಸಹಕರಿಸಿದರು.





