ಉಡುಪಿ: ಇತ್ತೀಚೆಗೆ ಬಿಜೆಪಿ ಸರಕಾರದ ವಿರುದ್ಧ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಡೆಕಾರ್, ಅಂಬಲಪಾಡಿ, ಬಡಾನಿಡಿಯೂರು ಹಾಗೂ ತೆಂಕನಿಡಿಯೂರು ಗ್ರಾಪಂಗಳ ಮುಂಭಾಗದಲ್ಲಿ ಜು.15ರಂದು ಹಮ್ಮಿಕೊಳ್ಳಲಾಗಿತ್ತು.
ಕಡೆಕಾರಿನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, 9/11 ಸಮಸ್ಯೆ, ಅಕ್ರಮ ಸಕ್ರಮ 53 ಮತ್ತು 57 ಅರ್ಜಿ ತಿರಸ್ಕಾರ, ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ರದ್ದತಿ ಹಾಗೂ ವಿದ್ಯುತ್ ದರ ಏರಿಕೆಯ ಕುರಿತು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಆರೋಪಿಸಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಉಡುಪಿಯ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗಮನಹರಿಸಲಿ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಬದಲು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿರುವ ಮಲ್ಪೆ ರಾಷ್ಟ್ರೀಯ ಹೆದ್ದಾರಿ, ಅಂಬಲಪಾಡಿ ರಸ್ತೆ, ಪರ್ಕಳ ರಸ್ತೆ ಹಾಗೂ ಸಂತೆಕಟ್ಟೆ ರಸ್ತೆಯ ಕಾಮಗಾರಿಯ ಬಗ್ಗೆ ಒತ್ತಾಯಿಸಲಿ. ಧರ್ಮದ ರಾಜಕಾರಣವನ್ನು ಬಿಟ್ಟು ಇನ್ನಾದರೂ ಅಭಿವೃದ್ಧಿಗೆ ಗಮನ ಕೊಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಹರೀಶ್ ಕಿಣಿ, ಕಡೆಕಾರ್ ಗ್ರಾಪಂ ಅಧ್ಯಕ್ಷ ಜಯಕರ್ ಶೇರಿಗಾರ್, ಉಪಾಧ್ಯಕ್ಷ ನವೀನ್ ಶೆಟ್ಟಿ, ಸದಸ್ಯರಾದ ಸರಸ್ವತಿ, ತಾರಾನಾಥ್ ಸುವರ್ಣ, ಸುಕನ್ಯಾ ಪೂಜಾರಿ, ಲೀಲಾ ಕುಂದರ್, ಇಂದಿರಾ ಶೆಟ್ಟಿ, ರಮೇಶ್ ಕೋಟ್ಯಾನ್, ನಿರ್ಮಲಾ, ವೀಣಾ ಪ್ರಕಾಶ್, ರಂಜಿತಾ, ದಿನೇಶ್, ನಾಯಕರಾದ ಮಹಾಬಲ ಕುಂದರ್, ನರಸಿಂಹಮೂರ್ತಿ, ಐರಿನ್ ಅಂದ್ರಾದೆ, ವನಜಾ ಜಯಕರ್, ನಳಿನಾಕ್ಷಿ ಬಂಗೇರ, ಸದಾನಂದ್ ಕುಲಾಲ್, ಸುರೇಶ್ ಶೆಟ್ಟಿ, ದಿನೇಶ್ ಪೂಜಾರಿ, ಗಣೇಶ್ ನೆರ್ಗಿ, ಸಂಧ್ಯಾ ತಿಲಕ್ ರಾಜ್, ಸತೀಶ್ ಕೊಡವೂರು, ಸತೀಶ್ ಮಂಚಿ ಉಪಸ್ಥಿತರಿದ್ದರು.



