ಉತ್ತರ ಪ್ರದೇಶ : ಖ್ಯಾತ ಕಬ್ಬಡಿ ಆಟಗಾರ ಬ್ರಿಜೇಶ್ ಅವರು ತಾನು ರಕ್ಷಿಸಿದ್ದ ಬೀದಿ ನಾಯಿಯಿಂದಲೇ ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಾಯಿ ಕಡಿತದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಬ್ರಿಜೇಶ್ ಸೋಲಂಕಿ ಸಾವನ್ನಪ್ಪಿದ್ದಾರೆ.
ಮಾರ್ಚ್ ನಲ್ಲಿ ನಾಯಿಯೊಂದು ಚರಂಡಿಗೆ ಬಿದ್ದಿತ್ತು. ಅದನ್ನು ರಕ್ಷಿಸುವ ಸಮಯದಲ್ಲಿ ಬಲಗೈಗೆ ಕಚ್ಚಿತ್ತು. ಅದನ್ನು ಸಣ್ಣ ಗಾಯವೆಂದು ಭಾವಿಸಿ, ನಿರ್ಲಕ್ಷಿಸಿದ್ದರು. ರೇಬಿಸ್ ಲಸಿಕೆಯನ್ನೂ ಪಡೆದಿರಲಿಲ್ಲ.. ಆದರೀಗ ರೇಬಿಸ್ ರೋಗಕ್ಕೆ ತುತ್ತಾಗಿ ಪ್ರಾಣಬಿಟ್ಟಿದ್ದಾರೆ.
ಅವರ ಕೊನೆಯ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೇಬಿಸ್ ರೋಗಕ್ಕೆ ತುತ್ತಾಗಿ ಹಾಸಿಗೆಯ ಮೇಲೆ ಮಲಗಿ ನೋವಿನಿಂದ ಒದ್ದಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.