Home Latest ಮುಂಬೈ :- ವಿಶ್ವ ಮಹಿಳಾ ದಿನಾಚರಣೆ  : ವಿಶುಶೆಟ್ಟಿಗೆ ತುಳುನಾಡ ಐಸಿರಿ ಪ್ರಶಸ್ತಿ : ಪ್ರಶಸ್ತಿ...

ಮುಂಬೈ :- ವಿಶ್ವ ಮಹಿಳಾ ದಿನಾಚರಣೆ  : ವಿಶುಶೆಟ್ಟಿಗೆ ತುಳುನಾಡ ಐಸಿರಿ ಪ್ರಶಸ್ತಿ : ಪ್ರಶಸ್ತಿ ಹಣ ಚಿಕಿತ್ಸೆಗೆ…!!

ಉಡುಪಿ : ಮುಂಬಯಿನ ನಾಲಾ ಸೋಪಾರದಲ್ಲಿ ತುಳುಕೂಟ ಆಯೋಜಿಸಿರುವ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶುಶೆಟ್ಟಿ ಅಂಬಲಪಾಡಿಯವರಿಗೆ 2026ರ ತುಳುನಾಡ ಐಸಿರಿ ಪ್ರಶಸ್ತಿಯನ್ನು ಅಧ್ಯಕ್ಷರಾದ ಶಶಿಧರ ಕೆ.ಶೆಟ್ಟಿ ಇನ್ನಂಜೆ ಹಾಗೂ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಯಶೋಧ ಎಸ್ ಕೊಟ್ಯಾನ್ ಹಾಗೂ ಗೌರವಾನ್ವಿತರ ಉಪಸ್ಥಿತಿಯಲ್ಲಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿಯೊಂದಿಗೆ ರೂ. 25,000 ಗೌರವ ಧನ ನೀಡಿದ್ದು, ವಿಶುಶೆಟ್ಟಿಯವರು ಸನ್ಮಾನದ ಹಣ ನೊಂದ ಅಸಹಾಯಕ ಮಹಿಳೆಯರಿಗೆ ನೀಡುತ್ತಿದ್ದು, ಈ ಬಾರಿ ಬನ್ನಂಜೆಯ ದಲಿತ ಮಹಿಳೆ ಶಕುಂತಳಾರವರ ಪತಿಯ ಚಿಕಿತ್ಸೆಗೆ ರೂ20,000 ಹಾಗೂ ರೂ.5000 ಬಾಲಕಿ ಕಾಪು ಹಿಮಾನಿ ಶೆಟ್ಟಿಯ ಚಿಕಿತ್ಸೆಗೆ ನೀಡಿ ಸಹಕರಿಸಿದರು.