Home Crime 12 ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ…!

12 ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ…!

ಮಂಗಳೂರು : 12ನೇ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆಗೈದ ಘಟನೆ ನಗರದ ಅತ್ತಾವರ ಕಾಸ ಗ್ರ್ಯಾಂಡ್ ದಲ್ಲಿ ಸಂಭವಿಸಿದೆ.

ಅತ್ತಾವರದ ಕಾಸ ಗ್ರ್ಯಾಂಡ್ ಕಟ್ಟಡದಲ್ಲಿ ಇರುವ ಗೆಳೆಯನನ್ನು ನೋಡಲು ಬಂದ ಕೆ.ಎಂಸಿ ವಿದ್ಯಾರ್ಥಿ ಸೆಕ್ಯೂರಿಟಿ ಬಳಿ ಸಹಿ ಮಾಡಿಸಿ 12 ನೇ ಮಹಡಿಗೆ ಹೋಗಿದ್ದಾನೆ.

ಅಲ್ಲಿಂದ ಮೊಬೈಲ್‌ ಕೆಳಗೆ ಇಟ್ಟು ಕೆಳಗೆ ಹಾರಿ ಆತ್ಮಹತ್ಯೆ ಮಾಡಿದ್ದಾನೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಆತ್ಮ ಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.