Home Karnataka ಅಪಘಾತ ಪ್ರಕರಣ ನಡೆದು 11 ವರ್ಷವಾದರೂ ಪರಿಹಾರವಿಲ್ಲ : ನ್ಯಾಯ ಯಾರಿಗೆ ಸಲ್ಲಬೇಕು.?…!!

ಅಪಘಾತ ಪ್ರಕರಣ ನಡೆದು 11 ವರ್ಷವಾದರೂ ಪರಿಹಾರವಿಲ್ಲ : ನ್ಯಾಯ ಯಾರಿಗೆ ಸಲ್ಲಬೇಕು.?…!!

ಬೆಂಗಳೂರು: ಅಪಘಾತ ನಡೆದು 11 ವರ್ಷ ಕಳೆದರೂ ಸಂತ್ರಸ್ತನಿಗೆ ನ್ಯಾಯ ಸಿಗದಿರುವ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಹಾಗೂ ನ್ಯಾಯವಾದಿ ಅರುಣ್ ಕುಂದರ್ ಕಲ್ಗದ್ದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನ್ಯ ನ್ಯಾಯಾಲಯವು ಸುಮಾರು 20 ಲಕ್ಷ ರೂ. ಹಾಗೂ ಬಡ್ಡಿ ನೀಡುವಂತೆ ಆದೇಶಿಸಿದ್ದರೂ, ಇದುವರೆಗೂ ಪರಿಹಾರ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶ ಪಾಲಿಸಲು ತೆರಳಿದ ಪೊಲೀಸರ ಮೇಲೆ ಆರೋಪಿಯ ಮನೆಯ ಯುವತಿಯಿಂದ ಹಲ್ಲೆ ಆರೋಪ ಕೇಳಿಬಂದಿರುವುದು ಆತಂಕಕಾರಿ ಬೆಳವಣಿಗೆ. ಸಂತ್ರಸ್ತನಿಗೆ ವರ್ಷಗಳ ಕಾಲ ಪರಿಹಾರ ಸಿಗದೇ ಇರುವುದೂ, ನ್ಯಾಯಾಲಯದ ಆದೇಶ ಜಾರಿಗೊಳಿಸಲು ಹೊರಟ ಪೊಲೀಸರಿಗೆ ದೂರು ಎದುರಾಗಿರುವುದೂ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು.
ಪ್ರಕರಣವನ್ನು ರಾಜಕೀಯ ಅಥವಾ ಸಂಘಟನೆಗಳ ದೃಷ್ಟಿಯಿಂದ ನೋಡದೆ, ಕೂಲಂಕುಶ ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರ ವಿರುದ್ಧ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು. ಅಪಘಾತ ಸಂತ್ರಸ್ತನಿಗೂ ಹಾಗೂ ಅನ್ಯಾಯಕ್ಕೊಳಗಾದರೆ ಯುವತಿಗೂ ನ್ಯಾಯ ಸಿಗಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಹರಿರಾಮ್ ಶಂಕರ್, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ, ಪ್ರಕರಣದ ಸಮಗ್ರ ತನಿಖೆಗೆ ಭರವಸೆ ನೀಡಿದ್ದು, ಪೊಲೀಸ್ ಇಲಾಖೆಗೆ ಗೌರವ ನೀಡಿ ನ್ಯಾಯಸಮ್ಮತ ತನಿಖೆಗೆ ಅವಕಾಶ ನೀಡಬೇಕು ಎಂದು ಅರುಣ್ ಕುಂದರ್ ಕಲ್ಗದ್ದೆ ಮನವಿ ಮಾಡಿದ್ದಾರೆ.