Home Crime ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ : ಬಂಧನದ ಬೆನ್ನಲ್ಲೇ ಆರೋಪಿ ತಂದೆಗೆ ಜಾಮೀನು…!!

ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ : ಬಂಧನದ ಬೆನ್ನಲ್ಲೇ ಆರೋಪಿ ತಂದೆಗೆ ಜಾಮೀನು…!!

ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿ ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ ಆರೋಪಿ ಕೃಷ್ಣ ಜೆ. ರಾವ್ (21) ಪರಾರಿಯಾಗಲು ಸಹಕರಿಸಿದ ಆರೋಪದಡಿ ಆರೋಪಿಯ ತಂದೆ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್‌ ಅವರನ್ನು ನನ್ನು ಬಂಧಿಸಲಾಗಿದ್ದು, ಇದೀಗ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆರೋಪಿ ನಾಪತ್ತೆ ಆದ ನಂತರ ಆತನಿಗೆ ಆಶ್ರಯ ನೀಡಿದ್ದ ಸಂಬಂಧಿಕರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಆ ವೇಳೆ ಆರೋಪಿಯ ಸುಳಿವು ಪತ್ತೆಯಾಗಿತ್ತು ಎನ್ನಲಾಗಿದೆ.

ಆರೋಪಿ ತಪ್ಪಿಸಿಕೊಂಡ ನಂತರ ಆತನ ಸುಳಿವು ಸಿಗದಂತೆ ಜಗನ್ನಿವಾಸ ರಾವ್ ಮಾಡಿದ್ದ ಎನ್ನಲಾಗಿದೆ. ಜು.4 ರಂದೇ ಜಗನ್ನಿವಾಸ ಅವರನ್ನು ‌ಪೊಲೀಸರು ಬಂಧಿಸಿದ್ದರು.