ಮೈಸೂರು : ಹಾಡಹಗಲೇ ಮಹಿಳೆಗೆ ಚಾಕು ಇರಿತ ಪ್ರಕರಣದಲ್ಲಿ ಹಲ್ಲೆಗೊಳಗಾದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಯುವತಿ ಕೊನೆಯುಸಿರೆಳೆದಿದ್ದಾರೆ.
ಪ್ರೀತಿ ವಿಚಾರದಲ್ಲಿ ಕೋಪದಿಂದ ಯುವಕ ಕೊಲೆ ಮಾಡಿದ್ದಾನೆ. ಲವ್ ಮಾಡಲ್ಲ ಎಂದಿದ್ದಕ್ಕೆ ಮಹಿಳೆಗೆ ಚಾಕುವಿನಿಂದ ಇರಿಯಲಾಗಿರುವ ಘಟನೆ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಾಂಡವಪುರದ ಎಲೆಕೆರೆ ಹ್ಯಾಂಡ್ ಪೋಸ್ಟ್ ಮೂಲದ ಪೂರ್ಣಿಮಾ (36) ಚಾಕು ಇರಿತಕ್ಕೆ ಒಳಗಾದ ಮಹಿಳೆ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾಳೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಗ್ರಾಮದ ಅಭಿಷೇಕ್ ಚಾಕು ಇರಿದಿರುವ ಯುವಕ.
ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ ಆರೋಪಿ ಅಭಿಷೇಕ್ ಬಂಧನವಾಗಿದೆ. ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.