Home Crime ಮಲ್ಪೆ : 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್‌ ಆಸಾಮಿ ಬೆಂಗಳೂರಿನಲ್ಲಿ ಬಂಧನ…!!

ಮಲ್ಪೆ : 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್‌ ಆಸಾಮಿ ಬೆಂಗಳೂರಿನಲ್ಲಿ ಬಂಧನ…!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್‌ ಆಸಾಮಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಜುಬೇರ (42), ತಂದೆ: ಅಹಮ್ಮದ್ ಸಾಹೇಬ್, ವಾಸ: ಜಾಮಿಯಾ ಮಸೀದಿ ಹತ್ತಿರ, ಕೊಂಡಿಬೇಂಗ್ರೆ, ಪಡುತೋನ್ಸೆ ಗ್ರಾಮ, ಉಡುಪಿ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಅಪರಾಧ ಕ್ರಮಾಂಕ 165/2011 (ಕಲಂ 420, 408, 109, 511 R/W 34 IPC) ಹಾಗೂ ಅಪರಾಧ ಕ್ರಮಾಂಕ 124/2011 (ಕಲಂ 379 IPC) ಪ್ರಕರಣಗಳು ದಾಖಲಾಗಿದ್ದವು.

ಈತ ದೀರ್ಘಕಾಲ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ಹಾಗೂ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರು ಅವರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣೆ ಉಪನಿರೀಕ್ಷಕ (ಕಾ&ಸು) ಅನೀಲ್ ಕುಮಾರ್ ಡಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತಂಡದಲ್ಲಿ HC ಸುರೇಶ್ ಕುಮಾರ್, HC ವಿಶ್ವನಾಥ್, HC ಭಾಸ್ಕರ್ ಹಾಗೂ PC ಕುಬೇರ ಇದ್ದರು. ಈ ತಂಡವು 22-03-2026 ರಂದು ಬೆಂಗಳೂರಿನ ಶಿವಾಜಿನಗರದಲ್ಲಿ ಆರೋಪಿಯನ್ನು ಬಂಧಿಸಿದ್ದು, 23-03-2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.