Home Karavali Karnataka ಭೀಮ ಶಕ್ತಿ ಸಮಾವೇಶ ಮತ್ತು ಬೈಂದೂರು ತಾಲೂಕು ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ…!!

ಭೀಮ ಶಕ್ತಿ ಸಮಾವೇಶ ಮತ್ತು ಬೈಂದೂರು ತಾಲೂಕು ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ…!!

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್‌ವಾದ ಜಿಲ್ಲಾ ಸಮಿತಿ, ಉಡುಪಿ ಬೈಂದೂರು ತಾಲೂಕು
ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು
ಭೀಮ ಶಕ್ತಿ ಸಮಾವೇಶವು ರೋಟರಿ ಸಮುದಾಯ ಭವನ, ಬೈಂದೂರು ಭಾನುವಾರ ನಡೆಯಿತು.

ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಬಳಿಕ ಮಾತನಾಡಿರಾಜ್ಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳೆದ ಹಲವರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಸಮಾಜದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸಮುದಾಯಗಳಿಗೆ ಹೋರಾಟ, ಪ್ರತಿಭಟನೆಯ ಮೂಲಕ ನ್ಯಾಯ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಶಾಖೆಗಳ ಮೂಲಕ ಸಂಘಟನೆಗೆ ಆದ್ಯತೆ ನೀಡಲಾಗಿದೆ ಎಂದರು.

ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ್ ಗಿಳಿಯಾರು ಮಾತನಾಡಿ ಇವತ್ತು ಬೈಂದೂರಿನಲ್ಲಿ ಭೀಮಶಕ್ತಿ ಸಮಾವೇಶ ಬಹಳ ಅದ್ದೂರಿಯಾಗಿ ನಡೆದಿದೆ ಹಾಗೂ ಈ ಸಮಯದ ಮೂಲಕ ಈಗಾಗಲೇ ಅಕ್ರಮ ಸಕ್ರಮ ಸಮಿತಿಯನ ರಚನೆ ಮಾಡಿಕೊಂಡಿದ್ದೀರಿ ದಲಿತರಿಗೆ ಎಷ್ಟು ಜಾಗವನ್ನು ಮಂಜೂರು ಮಾಡಿದ್ದೀರಿ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ನೂತನ ಅಧ್ಯಕ್ಷರಾದ ಶಿವರಾಜ್ ಬೈಂದೂರ್ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ನ್ಯಾಯ ಕೊಡಿಸುವಲ್ಲಿ ನಮ್ಮ ತಂಡ ಸಜ್ಜಾಗಿದೆ ಎಂದರು.

ಬೈಂದೂರು ತಾಲೂಕಿನ ನೂತನ ಪದಾಧಿಕಾರಿಗಳಿಗೆ
ಪದಗ್ರಹಣ ಸಮಾರಂಭ ಸಂಭ್ರಮದಲ್ಲಿ ನಡೆಯಿತು

ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗುರುರಾಜ್ ಗಂಟಿಹೊಳೆ
ಶಾಸಕರುಬೈಂದೂರು, ಕೆ. ಗೋಪಾಲ ಪೂಜಾರಿ
ಮಾಜಿ ಶಾಸಕರು ಬೈಂದೂರು, ಕೆ.ಎಲ್. ಅಶೋಕ್ ಜನಪರ ಹೋರಾಟಗಾರರು, ಭಾಸ್ಕರ್ ಮಾಸ್ಟರ್ ಜಿಲ್ಲಾ ಕೌಶಾಧಿಕಾರಿ,
ರಾಘವೇಂದ್ರ ಬೈಟು ಅಧ್ಯಕ್ಷರು, ವಜ್ರದುಂಬಿ ಗೆಳೆಯರ ಬಳಗ,
ಸುರೇಶ್ ಹಕ್ಲಾಡಿ, ಜಿಲ್ಲಾ ಸಂಘಟನಾ ಸಂಚಾಲಕರು,
ರಾಜು ಕೆ.ಸಿ. ಬೆಟ್ಟಿನಮನೆ ಕುಂದಾಪುರ ತಾಲೂಕು ಸಂಚಾಲಕರು,
ಶ್ರೀಮತಿ ಗೀತಾ ಸುರೇಶ್ ಕುಮಾರ್, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮಾಧವ ಬಾಕಡ ಜನಪರ ಹೋರಾಟಗಾರರು,
ನೂತನ ಸಂಚಾಲಕರಾದ ಶಿವರಾಜ್ ಬೈಂದೂರು
ಮಹಿಳಾ ಸಂಚಾಲಕರಾದ ವಿನೋದ ಮಾಸ್ತಿಕಟ್ಟೆ
ನೂತನ ಆಯ್ಕೆಯಾದ ಸರ್ವ ಪದಾಧಿಕಾರಿಗಳು ಸಂಘದ ಸರ್ವ ಸದಸ್ಯರು ಉಪಸಿತರಿದ್ದರು.

ಸುರೇಶ್ ಬೈಂದೂರು ಸ್ವಾಗತಿಸಿದರು ರವಿ ಬನ್ನಾಡಿ
ಚೈತ್ರ ಬೈಂದೂರು ನಿರೂಪಿಸಿದರು. ಮಂಜುನಾಥ ನಾಗೂರು, ಜಿಲ್ಲಾ ಸಂಘಟನಾ ಸಂಚಾಲಕರು ವಂದಿಸಿದರು.