Home Crime ವಿಟ್ಲದಲ್ಲಿ ಕೋಳಿ ಅಂಕ ಅಡ್ಡೆಗೆ ಪೊಲೀಸ್ ದಾಳಿ : ನಾಲ್ವರ ಬಂಧನ…!!

ವಿಟ್ಲದಲ್ಲಿ ಕೋಳಿ ಅಂಕ ಅಡ್ಡೆಗೆ ಪೊಲೀಸ್ ದಾಳಿ : ನಾಲ್ವರ ಬಂಧನ…!!

ವಿಟ್ಲ: ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ರಾಮಕೃಷ್ಣ ಅವರ ನೇತೃತ್ವದಲ್ಲಿ 25 ಜನವರಿ 2026ರಂದು ಮಧ್ಯಾಹ್ನ ಕೋಳಿ ಅಂಕ ಜೂಜಾಟದ ಮೇಲೆ ಯಶಸ್ವಿ ದಾಳಿ ನಡೆಸಲಾಗಿದೆ.ಮಧ್ಯಾಹ್ನ ಸುಮಾರು 1:20ಕ್ಕೆ ವಿಟ್ಲಮುಡ್ನೂರು ಗ್ರಾಮದ ಎಲ್ಯಣ್ಣ ಪೂಜಾರಿಯವರ ತೋಟದ ಬಳಿ ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಯಿತು.

ತಕ್ಷಣ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಸುಮಾರು 2 ಗಂಟೆ ವೇಳೆಗೆ ದಾಳಿ ನಡೆಸಿದರು.

ಈ ವೇಳೆ ಪೊಲೀಸರು ಬರುತ್ತಿದ್ದುದನ್ನು ಕಂಡು ಕೆಲವರು ಪರಾರಿಯಾಗಿದ್ದು, ಮಹೇಶ್, ಬಾಬು, ಆನಂದ ಮತ್ತು ಅಣ್ಣು ಎಂಬ ನಾಲ್ವರನ್ನು ಸ್ಥಳದಲ್ಲೇ ಬಂಧಿಸಲಾಯಿತು.

ಸ್ಥಳದಿಂದ ರೂ. 4,390 ನಗದು ಹಣ, 8 ಹುಂಜಗಳು (ಅಂದಾಜು ಮೌಲ್ಯ ರೂ. 4,550) ಹಾಗೂ 10 ಕೋಳಿ ಬಾಳುಗಳು (ಅಂದಾಜು ಮೌಲ್ಯ ರೂ. 500)ಗಳನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.