Home Latest ಉಡುಪಿ : ಕುಕ್ಕಿಕಟ್ಟೆ- ಮುಚ್ಲುಗೋಡು ಸಂಪರ್ಕ ರಸ್ತೆ ಬಳಿ ಗಬ್ಬು ನಾರುತ್ತಿರುವ ಡ್ರೈನೇಜ್…!!

ಉಡುಪಿ : ಕುಕ್ಕಿಕಟ್ಟೆ- ಮುಚ್ಲುಗೋಡು ಸಂಪರ್ಕ ರಸ್ತೆ ಬಳಿ ಗಬ್ಬು ನಾರುತ್ತಿರುವ ಡ್ರೈನೇಜ್…!!

ಉಡುಪಿ : ಕುಕ್ಕಿಕಟ್ಟೆ ಮುಖ್ಯ ರಸ್ತೆಯಿಂದ ಮುಚ್ಲುಕೋಡು ದೇವಸ್ಥಾನ ಸಂಪರ್ಕಿಸುವ ರಸ್ತೆಯ ಬಳಿ ಡ್ರೈನೇಜ್ ನೀರು ಮಳೆ ನೀರು ಹರಿಯುವ ಕಾಲುವೆಯಲ್ಲಿ ಹರಿಯುತ್ತಿದ್ದು, ಪರಿಸರದಲ್ಲಿ ರೋಗಭೀತಿ ಎದುರಾಗಿದೆ.

ಈ ರಸ್ತೆಯ ಸಮೀಪ ಖಾಸಗಿಯವರ ಬಹುಮಹಡಿ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣವಿದೆ. ಇದರಲ್ಲಿ ಉತ್ಪತ್ತಿಯಾಗುವ ತ್ಯಾಜ್ಯನೀರನ್ನು ಮಳೆ ನೀರು ಹರಿಯುವ ಕಾಲುವೆಗೆ ಬಿಡಲಾಗುತ್ತಿದೆ. ಇದರಿಂದಾಗಿ ಪರಿಸರವಿಡೀ ಗಬ್ಬು ನಾರುತ್ತಿದೆ.

ಉದ್ಭವಿಸಿರುವ ಸಮಸ್ಯೆಯ ಕುರಿತು ಹಲವಾರು ಬಾರಿ ಸಂಬoಧಪಟ್ಟವರಿಗೆ ದೂರು ನೀಡಿದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಪರಿಸರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ರೋಗ ಹರಡುವ ಭೀತಿ ಉಂಟಾಗಿದೆ. ಪರಿಸರದಲ್ಲಿ ವಾಕರಿಕೆ ತರಿಸುವ ಗಬ್ಬು ವಾಸನೆಯಿಂದ ಆಹಾರ ಸೇವನೆಗೂ ತೊಂದರೆ ಎದುರಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

 

ಜಿಲ್ಲಾಡಳಿತ, ನಗರಾಡಳಿತ ತಕ್ಷಣ ಎಚ್ಚೆತ್ತು ದುರ್ಗಂಧ ಬೀರುವ ಸ್ಥಳವನ್ನು ಪರಿಶೀಲಿಸಿ ತುರ್ತಾಗಿ ಸೂಕ್ತ ಕ್ರಮ ಜರುಗಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಆಗ್ರಹಿದ್ದಾರೆ.