Home Crime ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ…!!

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ…!!

ಉಡುಪಿ : ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕಿಶೋರ್ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ: ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,ಉಡುಪಿಯ ಸ್ಪೆಷಲ್ ಕೇಸ್ ನಂಬರ್ 09/2026(ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 98/2025 U/s 8A(C), 20(b)(2)A,22(b) of Narcotic Drugs and Psychotropic Substances Act)ನಲ್ಲಿ ಸುಮಾರು 1 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ ಬ್ರಹ್ಮಾವರ, ಕುಂದಾಪುರ, ಉಡುಪಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣ ದಾಖಲಾಗಿದ್ದ ವಾರೆಂಟ್ ಆಸಾಮಿಯಾದ ಕಿಶೋರ್ (24) S/o.ವಿಜಯ R/o ಲಕ್ಷ್ಮಿ ನಗರ, ಉಪ್ಪೂರು ಗ್ರಾಮ ಎಂಬುವರನ್ನು ಠಾಣಾ ವಾರೆಂಟ್ ಸಿಬ್ಬಂದಿಗಳಾದ HC ಸುರೇಶ್ ಕುಮಾರ್ ಮತ್ತು HC ಆದರ್ಶ ಮತ್ತು ಪಿಎಸ್ಐ ಹುಸೇನ್ ಸಾಬ್(ತನಿಖೆ) ಈ ದಿನ ದಿನಾಂಕ:11/03/2026 ಬ್ರಹ್ಮಾವರದ ಕೊಳಲಗಿರಿಯ ಲಕ್ಷ್ಮಿ ನಗರದಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ವಾರೆಂಟ್ ಆಸಾಮಿಗೆ ದಿನಾಂಕ :26/03/2026ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.