Home Crime ಮನೆಯ ಮಂದೆ ನಿಲ್ಲಿಸಿದ್ದ ಕಾರು ಕಳವು…!!

ಮನೆಯ ಮಂದೆ ನಿಲ್ಲಿಸಿದ್ದ ಕಾರು ಕಳವು…!!

ಉಡುಪಿ: ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳವುಗೈದ ಘಟನೆ ನಗರದ ಬಡಗುಬೆಟ್ಟು ಎಂದು ನಡೆದಿದೆ.

ಮೋಹನ್ ಎಂಬವರ ಕಾರು ಕಳ್ಳತನವಾಗಿದೆ.

ಈ ಘಟನೆ ಬಗ್ಗೆ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಮೋಹನ್‌ (53), 76 ಬಡಗಬೆಟ್ಟು ಗ್ರಾಮ ಇವರು KA-20-MB-9608 EECO Maruthi Company ಕಾರನ್ನು ಹೊಂದಿದ್ದು ಪ್ರತಿದಿನ ಅಂಗಡಿಗೆ ಹೋಗಿ ಬಂದು ಮನೆಯ ಮುಂದೆ ಸುಮಾರು 60 ಮೀಟರ್‌ ದೂರದಲ್ಲಿ ಉಮೇಶ ಎಂಬುವವರಿಗೆ ಸಂಬಂಧಪಟ್ಟ ಗದ್ದೆಯಲ್ಲಿ ಕಾರನ್ನು ನಿಲ್ಲಿಸುತ್ತಿದ್ದರು .ಪಿರ್ಯಾದಿದಾರರು ಪ್ರತಿದಿನದಂತೆ ದಿನಾಂಕ 16/06/2025 ರಂದು ಕೆಲಸ ಮುಗಿಸಿಕೊಂಡು ಬಂದು ರಾತ್ರಿ 10:15 ಗಂಟೆಗೆ ಕಾರನ್ನು ಲಾಕ್‌ ಮಾಡಿ ನಿಲ್ಲಿಸಿ ಮನೆಗೆ ಹೋಗಿದ್ದು, ಮರುದಿನ ದಿನಾಂಕ 17/06/2025 ಬೆಳಿಗ್ಗೆ 9:00 ಗಂಟೆಗೆ ಕಾರನ್ನು ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲಾಗಿ ಕಾರು ನಿಲ್ಲಿಸಿದ ಸ್ಥಳದಲ್ಲಿ ಇರುವುದಿಲ್ಲ. ದಿನಾಂಕ 16/06/2025 ರಂದು ರಾತ್ರಿ 10:15 ಗಂಟೆಯಿಂದ ದಿನಾಂಕ 17/06/2025 ರ ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ KA-20-MB-9608 EECO Maruthi Company ಕಾರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2025 ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.