ಬ್ರಹ್ಮಾವರ: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದು ಉಡುಪಿ ಹಾಗೂ ಬ್ರಹ್ಮಾವರದ ಮಹಿಳೆಯರನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ತನ್ನ ಬದುಕಿನಲ್ಲಿ ಅಂಧತ್ವ ಇದ್ದರೂ ಎದೆಗುಂದದೆ ಸರಸ್ವತಿ ದೇವಿಯನ್ನು ಒಲಿಸಿಕೊಂಡು ಇಷ್ಟರ ತನಕ 12 ಪುಸ್ತಕಗಳನ್ನು ಬರೆದಿರುವವರು 2025– 26 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಉಡುಪಿ ಕಲ್ಸಂಕ ಬಳಿಯ ಸೌಮ್ಯ ಪುತ್ರನ್ ರವರನ್ನು ಸನ್ಮಾನಿಸಲಾಯಿತು.
ಬ್ರಹ್ಮಾವರ ಬಾರ್ಕೂರು ಪರಿಸರದ ಶ್ರೀ ಮಾಸ್ತಿ ದುರ್ಗಾ ಮಹಿಳಾ ಭಜನಾ ಮಂಡಳಿ ಅಧ್ಯಕ್ಷ ರಾಗಿರುವ ವಿಶಾಲಾ ಮಹೇಶ್ ಪೂಜಾರಿ.
ಇಂದಿನ ಆಧುನಿಕ ಜಗತ್ತಿನ ನಡುವೆ ತಮ್ಮ ಸಂಸ್ಕೃತಿ ಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇವರ ಪ್ರಯತ್ನ ಅಪಾರ. ಸ್ಥಳೀಯ ಮಹಿಳೆಯರಿಗೆ ಭಜನೆ ಕಲಿಸುವ ಸೇವೆಯೊಂದಿಗೆ ರಂಗೋಲಿ ಮತ್ತು ಹೂವಿನ ಅಲಂಕಾರ ಮಾಡುವಲ್ಲಿ ಬಹಳ ಪ್ರವೀಣರಾಗಿದ್ದು ಇವರನ್ನೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಅನ್ಸಾರ್ ಅಹಮದ್, ಮಹಿಳಾ ಜಿಲ್ಲಾಧ್ಯಕ್ಷ ರಾದ ಜ್ಯೋತಿ ಶೇರಿಗಾರ್ತಿ, ಜಿಲ್ಲಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರು, ಜಿಲ್ಲಾ ಸಲಹೆಗಾರರಾದ ಸವಿತಾ, ಜಿಲ್ಲಾ ಉಪಾಧ್ಯಕ್ಷರಾದ ಅಫೋನ್ಸೊ ಮೆನೆಜಸ್ ಹಾಗೂ ಸದಸ್ಯರು ಹಾಜರಿದ್ದರು.









