ಮಂಗಳೂರು : ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ಸೇವಿಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂದರು ರಸ್ತೆಯಲ್ಲಿ ಮಾದಕ ಸೇವನೆ ಆರೋಪದಲ್ಲಿ ಕೋಝಿ ಕೋಡ್ ಕೊಂಬಡತ್ತ್ ನಿವಾಸಿ ಅನಿರುದ್ಧ ಎಂ.ಪಿ. (19), ಕಣ್ಣೂರು ಜಿಲ್ಲೆ ನಿವಾಸಿ ಅಲೈನ್ ಜಗದೀಶ್ (19)ನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕೋಟೆಪುರ ಬಳಿ ಮಾದಕ ಸೇವನೆ ಮಾಡಿದಮೊಹಿದ್ದಿನ್ ಆಶ್ವಾಕ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಡಿಕಲ್ ಬಸ್ ತಂಗುದಾಣ ಬಳಿ ಮಾದಕ ಸೇವನೆ ಮಾಡಿದ್ದ ತ್ರಿಶೂರ್ ನಿವಾಸಿ ಗಂಗಾದುತ್ತನ್ (20) ಎಂಬಾತನನ್ನು ಮತ್ತು ಕೋಡಿ ಕಲ್ ಕ್ರಾಸ್ ಬಳಿ ಮಾದಕ ಸೇವನೆ ಮಾಡುತ್ತಿದ್ದ ಕೋಟೆಕಾರು ನಿವಾಸಿ ಮನಿಷ್ (20) ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಇವರೆಲ್ಲರ ವೈದ್ಯಕೀಯ ತಪಾಸಣೆ ಯಲ್ಲಿ ಮಾದಕ ಸೇವನೆ ದೃಢಪಟ್ಟಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.




