ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಪರ್ಯಾಯ ಮಹೋತ್ಸವದ ಅಂಗವಾಗಿ ಶ್ರೀ ಶೀರೂರು ಮಠದ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಸಂದರ್ಭದಲ್ಲಿ ಉಡುಪಿ ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಶ್ರೀಕೃಷ್ಣ ಮಠಕ್ಕೆ ಗೌರವ ಭೇಟಿ ನೀಡಿದರು.
ಈ ವೇಳೆ ಅಸೋಸಿಯೇಷನ್ ಪದಾಧಿಕಾರಿಗಳು ಶ್ರೀಪಾದರಿಂದ ಫಲ-ಮಂತ್ರಾಕ್ಷತೆ ಪಡೆದು ಆಶೀರ್ವಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಉಪಸ್ಥಿತರಿದ್ದರು.
ಉಡುಪಿ ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಯು. ವಸಂತ್ ರೈ, ಉಪಾಧ್ಯಕ್ಷರಾದ ಜಿ. ಮಂಜುನಾಥ್ ಶೇಟ್, ಕಾರ್ಯದರ್ಶಿ ಕೆ. ಪ್ರವೀಣ್ ಶೇಟ್, ಜೊತೆ ಕಾರ್ಯದರ್ಶಿ ಮೋಹನ್ ಎಂ.ಪಿ., ಕೋಶಾಧಿಕಾರಿ ಸದಾನಂದ ಪೂಜಾರಿ ಹಾಗೂ ಸದಸ್ಯರಾದ ಜಿ. ಜಯ ಆಚಾರ್ಯ, ವೀರೇಂದ್ರ ಶೇಟ್, ಬಿ. ಸತ್ಯನಾರಾಯಣ ಶೇಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪರ್ಯಾಯದ ಈ ಪವಿತ್ರ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಶ್ರೀಪಾದರಿಗೆ ಶುಭಾಶಯ ಸಲ್ಲಿಸಿ, ಧಾರ್ಮಿಕ ಕಾರ್ಯಚಟುವಟಿಕೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.



