ಮಣಿಪಾಲ : ಅಂತರ್-ರಾಜ್ಯ ಮನೆ ಕಳ್ಳತನದ ಮುಸುಕುಧಾರಿ TATTO – 313 ಗ್ಯಾಂಗ್ ಭೇದಿಸಿದ ಮಣಿಪಾಲ ಪೊಲೀಸರು ಇಬ್ಬರು ಅರೋಪಿಗಳು ಹಾಗೂ ಮೌಲ್ಯ ರೂ.7,90,000 ಬೆಲೆ ಬಾಳುವ ಚಿನ್ನಾಭರಣಗಳ ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ದರ್ಶನ್ ಆರ್ ಹಾಗೂ ಚಂದ್ರು ಎಂದು ಗುರುತಿಸಲಾಗಿದೆ.
ಪ್ರಕಣದ ವಿವರ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ಮನೆಯಲ್ಲಿ ಫಿರ್ಯಾದಿ ಅಮಿತ ಡ್ಯಾನಿಯಲ್, ಶಿವಳ್ಳಿ ಗ್ರಾಮ ಇವರು ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು, ದಿನಾಂಕ:03.02.2026 ರಂದು 01:45 ಗಂಟೆಗೆ ಮನೆಯ ಬಾಗಿಲು ಮತ್ತು ಹೊರಗಿನ ಗೇಟಿಗೆ ಬೀಗ ಹಾಕಿ ತಾಯಿ ಮನೆಗೆ ಹೋಗಿದ್ದು ದಿನಾಂಕ: 04.02.2026 ರಂದು ಮದ್ಯಾಹ್ನ 01:30 ಗಂಟೆಯ ಸಮಯಕ್ಕೆ ಬಾಗಿಲು ತೆರೆದಿರುವುದಾಗಿ ಪಕ್ಕದ ಮನೆಯವರು ಫಿರ್ಯಾದಿದಾರರಿಗೆ ತಿಳಿಸಿದ್ದು, ಫಿರ್ಯಾದಿದಾರರು ಬಂದು ನೋಡಲಾಗಿ ದಿನಾಂಕ: 03.02.2026 ರಂದು 03:45 ಗಂಟೆಯಿಂದ ದಿನಾಂಕ: 04.02.2026 ರ ಮದ್ಯಾಹ್ನ 02:00 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಮನೆಯಲ್ಲಿದ್ದ 75 ಗ್ರಾಂ ತೂಕದ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 15/2026 ಕಲಂ.331(3),(4), 305 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ 06/06/2026 ರಂದು ಪಿಎಸ್ ಐ (ತನಿಖೆ) ಶಂಭುಲಿಂಗಯ್ಯ ಹಾಗೂ ಠಾಣಾ ಅಪರಾಧ ಸಿಬ್ಬಂದಿಗಳಾದ ರವಿರಾಜ್ ,ಮಂಜುನಾಥ ರವರು ರಾತ್ರಿ ರೌಂಡ್ಸ ಕರ್ತವ್ಯದಲ್ಲಿರುವಾಗ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಗೋಡಾನ್ ರಸ್ತೆ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಂಡು ಸದ್ರಿಯವರಲ್ಲಿ ಅನುಮಾನಸ್ಪದ ವಸ್ತುಗಳು ಕಂಡು ಬಂದಿದ್ದು ಈ ಬಗ್ಗೆ ವಿಚಾರಿಸಲಾಗಿ ದರ್ಶನ್ ಆರ್ (21) ತಂದೆ : ದಿ .ರವಿ ವಾಸ : ರಾಘವೇಂದ್ರ ಲೇಔಟ್ 7 ಕ್ರಾಸ್,ಸಿಂಗಸಂದ್ರ ವಾರ್ಡ್,ಬೆಂಗಳೂರು , ಇನ್ನೋರ್ವ ಚಂದ್ರು (26) ತಂದೆ : ದಿ. ಭೀಮಾನಾಯ್ಕ ಬಸವನಹಾಳ ಗೊಲ್ಲರಹಟ್ಟಿ,ಬಸವನಹಾಳ ಅಂಚೆ ,ದಾವಣಗೆರೆ ಜಿಲ್ಲೆ ಆಗಿರುತ್ತಾರೆ. ಸದ್ರಿಯವರನ್ನು ಕೂಲಂಕುಷವಾಗಿ ವಿಚಾರಿಸಲಾಗಿ ನಾವುಗಳು ರೈಲ್ವೆ ಹಳಿ ಹತ್ತಿರದ ಬೀಗ ಹಾಕಿದ ಮನೆಗಳ ಬಾಗಿಲು ಮುರಿದು ಒಳ ಪ್ರವೇಶಿಸಿ ಕಳ್ಳತನ ಮಾಡಿರುವುದಾಗಿ ಹಾಗೂ ಈಗ ಕೂಡ ಅದೇ ಪರಿಸರದಲ್ಲಿ ಕಳ್ಳತನ ಮಾಡಲು ಹೊರಟಿರುವುದಾಗಿ ತಿಳಿಸಿದ ಮೇರೆಗೆ ಸಂಶಯಾಸ್ಪದ ಸದ್ರಿ ಇಬ್ಬರು ವ್ಯಕ್ತಿಗಳನ್ನು ಹಾಗೂ ಮನೆಗಳ ಬಾಗಿಲು ಮುರಿಯಲು ತಂದ ಕೈಯಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಯಿತು.
ಮಣಿಪಾಲ ಪೊಲೀಸ್ ಠಾಣೆಗೆ ಕರೆ ತಂದ ಸಂಶಯಾಸ್ಪದ ವ್ಯಕ್ತಿಗಳನ್ನು ಪೊಲೀಸ್ ನಿರೀಕ್ಷಕರಾದ ಮಹೇಶ ಪ್ರಸಾದ್ ರವರು ಕೂಲಂಕುಷವಾಗಿ ಪರಿಶೀಲಿಸಿದಲ್ಲಿ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ: 15/2026ರ ಕಳ್ಳತನ ಪ್ರಕರಣದ ಆರೋಪಿಗಳು ಎಂಬುದಾಗಿ ದೃಢಪಡಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಆರೋಪಿತರಿಂದ ಪ್ರಕರಣದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವ ಸಲುವಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಆರೋಪಿತರು ಶಿವಮೊಗ್ಗದ ಲಾಡ್ಜ್‌ವೊಂದರಲ್ಲಿ ರೂಮ್ ನ್ನು ಮಾಡಿ ಚಿನ್ನಾಭರಣವನ್ನು ಇಟ್ಟಿರುವ ಬಗ್ಗೆ ತಿಳಿಸಿದ ಮೇರೆಗೆ ಶಿವಮೊಗ್ಗಕ್ಕೆ ತೆರಳಿ ಸದ್ರಿ ಆರೋಪಿತರಿಂದ 1) 39.70 gm ತೂಕದ ಚಿನ್ನದ ಕರಿಮಣಿ ಸರ -01- ಅಂದಾಜು ಮೌಲ್ಯ 5.06,000/- 2) 13.30 gm ತೂಕದ ಚಿನ್ನದ ನೆಕ್ಲೆಸ್ 01 – ಅಂದಾಜು ಮೌಲ್ಯ 1,86,000/- 3) 3.15gm ತೂಕದ ಚಿನ್ನದ ಕಿವಿಯೋಲೆ 01 ಜೊತೆ ಅಂದಾಜು ಮೌಲ್ಯ -44,000/- 4) 3.87 gm ತೂಕದ ಚಿನ್ನದ ಚೈನ್ 01 –ಅಂದಾಜು ಮೌಲ್ಯ 54,000/- ,60 ಗ್ರಾಂ – ಒಟ್ಟು 790000 ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಆರೋಪಿತರಿಂದ 02 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ರಿ ಆರೋಪಿಗಳು ಕೈಗಳಿಗೆ TATTO 313 ಎಂಬ ಅಚ್ಚೆ ಹಾಕಿಕೊಂಡು TATTO 313 ಗ್ಯಾಂಗ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದು, ಕರ್ನಾಟಕ ತಮಿಳನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣದ ಹತ್ತಿರವಿರುವ ಮನೆಗಳನ್ನು ಗುರಿಯಾಗಿರಿಸಿ ರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಗಳಿಗೆ ಗ್ಲೌಸ್ ಗಳನ್ನು ಧರಿಸಿ ಕಾಲಿಗೆ ಸಾಕ್ಸ್ ಗಳನ್ನು ಹಾಕಿಕೊಂಡು ಹಾಗೂ ಕೈಯಲ್ಲಿ ಮನೆಯ ಬಾಗಿಲು ಒಡೆಯಲು ಕಬ್ಬಿಣದ ಆಯುಧಗಳನ್ನು ಹಿಡಿದುಕೊಂಡು ಬೀಗ ಹಾಕಿದ ಮನೆಗಳನ್ನು ಕಳ್ಳತನ ಮಾಡುವ ಪ್ರವೃತ್ತಿ ಹೊಂದಿರುತ್ತಾರೆ.
ಸದ್ರಿ ಆರೋಪಿತರ ವಿರುದ್ಧ ಕರ್ನಾಟಕ ಹಾಗೂ ತಮಿಳನಾಡು ರಾಜ್ಯಗಳಲ್ಲಿ ಹಲವಾರು ಪ್ರಕರಣ ದಾಖಲಾಗಿರುತ್ತವೆ. ಹಾಗೂ ತನಿಖೆ ವೇಳೆ ಸದ್ರಿ ಆರೋಪಿತರು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025 ರ ಸೆಪ್ಟೆಂಬರ್ ತಿಂಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಬೆಳಕಿಗೆ ಬಂದಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲು ಬಾಕಿ ಇರುತ್ತದೆ.








