ಉಡುಪಿ: ನಗರದ ಸಮೀಪ ಮಹಿಳೆಯೊಬ್ಬರಿಗೆ ಟ್ರೇಡಿಂಗ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ವಂಚನೆಗೊಳಾದ ಮಹಿಳೆ ದಿಪ್ತಿ ಎಂದು ತಿಳಿದು ಬಂದಿದೆ.
ಪ್ರಕರಣ ವಿವರ : ಪಿರ್ಯಾದಿದಾರರಾದ ದೀಪ್ತಿ (26) ಇವರನ್ನು ದಿನಾಂಕ 01/06/2025 ರಂದು ಟೆಲಿಗ್ರಾಂ ಆಪ್ ನಲ್ಲಿ ಯಾರೋ ಅಪರಿಚಿತರು K&K GROUP ಎಂಬ ಗ್ರೂಪ್ ಗೆ ಸೇರ್ಪಡೆ ಮಾಡಿ ಕೆಲವೊಂದು ಟಾಸ್ಕ್ ಗಳನ್ನು ನೀಡಿ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದಾಗಿ ಪಿರ್ಯಾದಿದಾರರನ್ನು ನಂಬಿಸಿದ್ದು, ಅದರಂತೆ ಪಿರ್ಯಾದುದಾರರು ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ದಿನಾಂಕ 01/06/2025 ರಿಂದ ದಿನಾಂಕ 04/06/2025 ರ ವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 4,92,477/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಅದರೆ ಅಪರಿಚಿತ ವ್ಯಕ್ತಿಗಳು ಈ ತನಕ ಪಿರ್ಯಾದಿದಾರರು ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2025 ಕಲಂ: 66(ಸಿ),66(ಡಿ)ಐ.ಟಿ. ಆಕ್ಟ್ ಮತ್ತು 318(4) ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.