ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದ ಹೋಟೆಲ್‌ಗೆ ಕೆಲಸಕ್ಕೆ ಸೇರಿರುವುದಾಗಿ ಹೇಳಿ ಮನೆಯಿಂದ ಹೋದ ವ್ಯಕ್ತಿ ಬಳಿಕ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿರುವ ಘಟನೆ ನಡೆದಿದೆ.
ಕಾಣೆಯಾದವರನ್ನು ಸಂತೋಷ ನಾಯಕ್ (46) ಎಂದು ಗುರುತಿಸಲಾಗಿದೆ. ದೂರುದಾರರು ಅವರ ಪತ್ನಿ ಎಲಿಜಬೆತ್ (45), ವಾಸ ಕರಾವಳಿ ಬೈಪಾಸ್, ಉಡುಪಿ ಎಂದು ತಿಳಿಯಲಾಗಿದೆ
ದಿನಾಂಕ 17-10-2026 ರಂದು ಸಂಜೆ 4:55 ಗಂಟೆಗೆ ಸಂತೋಷ ನಾಯಕ್ ಅವರು ದೂರುದಾರರ ಮಗಳಿಗೆ ಫೋನ್ ಮಾಡಿ ಕಾರ್ಕಳದ ಹೋಟೆಲ್‌ಗೆ ಕೆಲಸಕ್ಕೆ ಸೇರಿರುವುದಾಗಿ ತಿಳಿಸಿದ್ದರು. ಬಳಿಕ ಯಾವುದೇ ಫೋನ್ ಮಾಡದೆ ಇದ್ದು, ಫೋನ್ ಸ್ವಿಚ್ ಆಫ್ ಆಗಿದೆ. ಅವರು ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆಯಾದ ಪ್ರಕರಣವಾಗಿ ದಾಖಲಾಗಿದ್ದು, ಪೊಲೀಸರು ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.



