Home Crime ಪಾದಚಾರಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದು ಸಾವು…!!

ಪಾದಚಾರಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದು ಸಾವು…!!

ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಪಾದಚಾರಿಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟವರು ರವಿ ಎಂದು ತಿಳಿದು ಬಂದಿದೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ವಿವರ: ಪಿರ್ಯಾದಿದಾರರಾದ ರಾಘವೇಂದ್ರ (53), ಅಂಜಾರು ಗ್ರಾಮ ಉಡುಪಿ ಇವರು ಕೋಟ್ನಕಟ್ಟೆ ಪೆಟ್ರೋಲ್‌ ಪಂಪ್‌ನಲ್ಲಿ ತನ್ನ ವಾಹನಕ್ಕೆ ಪೆಟ್ರೋಲ್‌ ತುಂಬಿಸಿ ಮನೆಗೆ ಹೊರಟು ಮಹಾಲಸ ಫ್ಯಾಕ್ಟರಿ ಬಳಿ ಬರುತ್ತಿರುವಾಗ ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಒರ್ವ KA-20-HC-0669 ಮೋಟಾರು ಸೈಕಲ್‌ ಸವಾರ ತನ್ನ ಬೈಕನ್ನು ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಪದಾಚಾರಿ ಡಾಮಾರು ರಸ್ತೆಗೆ ಬಿದ್ದಿದ್ದು ತಕ್ಷಣ ಪಿರ್ಯಾದಿದಾರರು ಬಿದ್ದವರನ್ನು ಎಬ್ಬಿಸಿ ಉಪಚರಿಸಿ ನೋಡಲಾಗಿ ಪರಿಚಯದ ರವಿ ಆಗಿರುತ್ತಾರೆ. ಅವರಿಗೆ ತಲೆಯ ಹಿಂಭಾಗಕ್ಕೆ , ಕೈಕಾಲಿಗೆ , ದೇಹಕ್ಕೆ ರಕ್ತ ಗಾಯವಾಗಿರುತ್ತದೆ. ನಂತರ ಅವರನ್ನು ಅಂಬ್ಯುಲೆನ್ಸ್‌ನಲ್ಲಿ ಉಡುಪಿ ಸರಕಾರಿ ಅಸ್ಪತ್ರೆಗೆ ದಾಖಲಿಸಿದ್ದು ನಂತರ ರಾತ್ರಿ 10:30 ಗಂಟೆಗೆ ಅಬ್ಯುಲೆನ್ಸ್‌ರವರಲ್ಲಿ ಪಿರ್ಯಾದಿದಾರರು ಪೋನ್‌ ಕರೆ ಮಾಡಿ ಕೇಳಿದಲ್ಲಿ ರವಿ ರವರು ದಾರಿ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2025 ಕಲಂ: 28̧̧1, 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ.