Home Crime ಪುತ್ತೂರು: ನಗರಸಭೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು…!!

ಪುತ್ತೂರು: ನಗರಸಭೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು…!!

ಪುತ್ತೂರು: ಕಾಲೇಜಿಗೆ ಹೋಗಲೆಂದು ನಗರಸಭೆಯ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳವಾಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ದೂರುದಾರರನ್ನು ಮಡಿಕೇರಿ ತಾಲೂಕು, ಕೊಡಗು ಜಿಲ್ಲೆಯ ಮೇಲ್ಚಂಬು ಗ್ರಾಮದ ಮೊಯಿನುದ್ದೀನ್ ಫಾಝೀಲ್ (21) ಎಂದು ಗುರುತಿಸಲಾಗಿದೆ.

ಇವರು ದಿನಂಪ್ರತಿ ಪಿ.ಎ. ಕಾಲೇಜು ಮುಡಿಪು ಎಂಬಲ್ಲಿಗೆ ವಿದ್ಯಾಭ್ಯಾಸಕ್ಕೆ ಹೋಗುವವರಾಗಿದ್ದು, ಮನೆಯಿಂದ ಪುತ್ತೂರಿಗೆ ತನ್ನ ತಂದೆಯ ಬಾಬ್ತು KA 21 Q 9204 ನೇ ಹಿರೋ ಹೊಂಡಾ ಮೋಟಾರು ಸೈಕಲ್‌ನಲ್ಲಿ ಬಂದು ಪುತ್ತೂರು ಕಸಬಾ ಗ್ರಾಮದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ನಗರಸಭೆಯ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಕಾಲೇಜಿಗೆ ತೆರಳಿದ್ದರು.

ನಂತರ ಅದೇ ದಿನ ಕಾಲೇಜು ಮುಗಿಸಿ ಸಂಜೆ 5:45 ಗಂಟೆಯ ವೇಳೆಗೆ ಬಂದು ಮೋಟಾರ್ ಸೈಕಲ್ ನಿಲ್ಲಿಸಿದಲ್ಲಿ ನೋಡಲಾಗಿ, ಅಲ್ಲಿ ಬೈಕ್ ಕಂಡು ಬಂದಿಲ್ಲ. ಸುತ್ತಮುತ್ತ ಹಾಗೂ ಪುತ್ತೂರು ಪೇಟೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ.

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.