ರಜತ ಸಂಭ್ರಮದಲ್ಲಿರುವvಶ್ರೀ ಭ್ರಾಮರಿ ನಾಟ್ಯಾಲಯ (ರಿ.) ಅಮ್ಮುಂಜೆ…
ಉಡುಪಿ: ರಜತ ವರ್ಷದ “ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ – 16 “ಕಾರ್ಯಕ್ರಮವು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣ ಕಲ್ಯಾಣಪುರದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ನಾಟ್ಯಾಂಜಲಿ ಸುರತ್ಕಲ್ ಇದರ ನಿರ್ದೇಶಕರಾದ
ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ ಚಂದ್ರಶೇಖರ ನಾವಡರು ತಮ್ಮ ಅಮೃತಹಸ್ತದಿಂದ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭಾಶಿರ್ವಾದ ನೀಡಿದರು. ನಂತರ ಗುರು ವಿದ್ವಾನ್ ಕೆ ಭವಾನಿಶಂಕರ್ ರವರಿಗೆ ಗುರುವಂದನ ಕಾರ್ಯಕ್ರಮ ಜರುಗಿತು.ಸಾತ್ವಿಕ್ ಕೆ ರವರ “ಕೃಷ್ಣಾರ್ಪಣಂ” ನೃತ್ಯ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು. ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಶ್ರೀ ಯುವರಾಜ್ ಪಿ, ಮುಖ್ಯೋಪಾಧ್ಯಾಯರಾದ, ಸುರೇಶ್ ನಾಯಕ್, ವನಿತಾ ಶೆಟ್ಟಿ ಸಾತ್ವಿಕ್ ರವರ ಮಾತಾಪಿತರಾದ ಶ್ರೀ ಕೃಷ್ಣಪ್ಪ ಹಾಗೂ ಪುಷ್ಪಲತಾ ಟೀಚರ್ ಉಪಸ್ಥಿತರಿದ್ದರು. ಗುರುಗಳಾದ ವಿದ್ವಾನ್ ಕೆ ಭವಾನಿಶಂಕರ್ ಪ್ರಾಸ್ತಾವಿಕದೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.
ನಾಯಕ ಭಾವದ ಲಕ್ಷಣಗಳುಳ್ಳ ನೃತ್ಯ ಪ್ರಸ್ತುತಿಗಳು ಪ್ರಸ್ತುತಗೊಂಡವು. ಶ್ರೀಮತಿ ಪುಷ್ಪಲತಾ ರವರು ವಂದನಾರ್ಪಣೆಗೈದರು. ಶ್ರೀ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.








