ಬೈಂದೂರು: ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಸರಣಿ ಕಳ್ಳನನ್ನು ಬೈಂದೂರು ಪೊಲೀಸರು ಬಂಧಿಸಿದ್ದು, ಆತನಿಂದ 3 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಪ್ರಹ್ಲಾದ್ (32), ತಂದೆ ಶೀನ ಪೂಜಾರಿ, ವಾಸ ಗೋಳಿಬೆಟ್ಟು, ಸಾಸ್ತಾನ, ಐರೋಡಿ ಗ್ರಾಮ, ಉಡುಪಿ ತಾಲೂಕು ಎಂದು ಗುರುತಿಸಲಾಗಿದೆ.
ದಿನಾಂಕ 02.08.2026 ರಂದು ಫಿರ್ಯಾದುದಾರರಾದ ರೂಬೆನ್ ಫೆರ್ನಾಂಡಿಸ್ ಅವರು ಮಂಗಳೂರಿನಿಂದ ಮಡಗಾಂವ್ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಅದೇ ದಿನ ಬೆಳಗಿನ ಜಾವ ಸುಮಾರು 2:00 ಗಂಟೆಗೆ ಬೈಂದೂರು ರೈಲು ನಿಲ್ದಾಣದ ಬಳಿ, ಅವರ ಬಳಿ ಇದ್ದ ಮೊಟೊರೊಲಾ G54 5G ಮೊಬೈಲ್ ಫೋನ್ ಅನ್ನು ರೈಲಿನಲ್ಲಿದ್ದ ಯಾರೋ ಅಪರಿಚಿತ ವ್ಯಕ್ತಿ ಕಳವು ಮಾಡಿಕೊಂಡು ಹೋಗಿದ್ದನು. ಕಳವಾದ ಮೊಬೈಲ್ನ ಅಂದಾಜು ಮೌಲ್ಯ ರೂ. 17,000/- ಆಗಿದ್ದು, ಆರೋಪಿ ಸದರಿ ಮೊಬೈಲ್ ಮೂಲಕ UPI ಮುಖಾಂತರ ಒಟ್ಟು ರೂ. 19,847/- ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವುದಾಗಿ ಫಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಬೈಂದೂರು ವೃತ್ತದ ಪೊಲೀಸ್ ನಿರೀಕ್ಷಕ ಶಿವಕುಮಾರ್ ಬಿ. ಅವರು ಕೈಗೊಂಡಿದ್ದು, ತನಿಖೆಯ ವೇಳೆ ಪ್ರಹ್ಲಾದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಕಳವು ಮಾಡಿದ್ದ 1) ಮೊಟೊರೊಲಾ G54 5G ಮೊಬೈಲ್ ಫೋನ್ 2) ಆಪಲ್ ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್ 3) IQ Z9 ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ವಿಚಾರಣೆ ವೇಳೆ ದಿನಾಂಕ 02.08.2026 ರಂದು ಜೋಶಿ ನಾರಾಯಣ ನಾಯಕ್ ಜೊತೆ ಸೇರಿ ಬೈಂದೂರು ಸಮೀಪ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರ ಸ್ಯಾಮ್ಸಂಗ್ M34 ಮೊಬೈಲ್ ಕಳವು ಮಾಡಿರುವುದಾಗಿ, ಹಾಗೂ ದಿನಾಂಕ 13.10.2026 ರಂದು ಜೋಶಿ ನಾರಾಯಣ ನಾಯಕ್ ಜೊತೆ ಸೇರಿ ಬೈಂದೂರು ಸಮೀಪ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರ ಆಪಲ್ ಐಫೋನ್ 16 ಪ್ರೋ ಮ್ಯಾಕ್ಸ್ ಮೊಬೈಲ್ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ದಿನಾಂಕ 06.03.2026 ರಂದು ಬೈಂದೂರು ಸಮೀಪ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರ IQ Z9 ಮೊಬೈಲ್ ಕೂಡ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/2026 ಕಲಂ 305 BNS, ಅಪರಾಧ ಕ್ರಮಾಂಕ 144/2026 ಕಲಂ 305(c) BNS ಮತ್ತು ಅಪರಾಧ ಕ್ರಮಾಂಕ 168/2026 ಕಲಂ 305(ಬಿ) BNS ರಂತೆ ಪ್ರಕರಣ ದಾಖಲಾಗಿದೆ.
ಇದಲ್ಲದೆ ಆರೋಪಿ ವಿರುದ್ಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2025 ಕಲಂ 303(2) BNS, ಬಂಟ್ವಾಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2023 ಕಲಂ 379 IPC, ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2023 ಕಲಂ 379 IPC, ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2017 ಕಲಂ 457, 380 IPC, ಕೋಟಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2013 ಕಲಂ 457, 380 IPC ಮತ್ತು ಕುಂದಾಪುರ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 325/2025 ಕಲಂ 392 IPC ಪ್ರಕರಣಗಳಲ್ಲಿ ಆರೋಪಿಯಾಗಿರುತ್ತಾನೆ.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾದ ಸುನಿಲ್ ಕುಮಾರ್ ಬಿ.ವೈ., ಮಹೇಶ್ ಪೂಜೇರ ಹಾಗೂ ಸಿಬ್ಬಂದಿಗಳಾದ ಜಯರಾಮ, ಚಿದಾನಂದ ಮತ್ತು ಮಾಲಪ್ಪ ದೇಸಾಯಿ ಭಾಗವಹಿಸಿದ್ದರು.
ಆರೋಪಿಯನ್ನು ಕಾನೂನುಬದ್ಧವಾಗಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.



