ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆಯ ಮೀನುಗಾರಿಕೆ ತೆರಳಿದ್ದ ಬೋಟಿನಲ್ಲಿ ಕೆಲಸ ಮಾಡುತ್ತಿರುವಾಗ ವ್ಯಕ್ತಿಯೊಬ್ಬರು ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾದ ಘಟನೆ ಸಂಭವಿಸಿದೆ.
ಸಾವನ್ನಪ್ಪಿದ ವ್ಯಕ್ತಿ ವಯಾಲ್ ರವಿ ಎಂದು ತಿಳಿದು ಬಂದಿದೆ.
ಘಟನೆ ವಿವರ: ಪಿರ್ಯಾದಿದಾರರಾದ ಸಹಾಸ್ (25), ಮಂಗಳೂರು ಇವರು ಮಂಗಳೂರಿನ ಬಂದರಿನಲ್ಲಿ IND-KA-01-MM-4219 ಎಂಬ ನೊಂದಣಿ ಸಂಖ್ಯೆಯ ವಿಶ್ವನಾಗ್ ಎಂಬ ಹೆಸರಿನ ಬೋಟ್ ನ್ನು ಹೊಂದಿದ್ದು ಬೋಟ್ ನಲ್ಲಿ ಸುಮಾರು 10 ಜನ ಕೆಲಸ ಮಾಡಿಕೊಂಡಿದ್ದು ದಿನಾಂಕ 20/05/2025 ರಂದು ಮಧ್ಯಾಹ್ನ 12:00 ಗಂಟೆಗೆ ಮಂಗಳೂರಿನ ಬಂದರಿನಿಂದ ಮೀನುಗಾರಿಕೆ ಬಗ್ಗೆ ಹೊರಟಿರುತ್ತದೆ. ದಿನಾಂಕ 25/05/2025 ರಂದು 11:45 ಗಂಟೆಗೆ ಬೋಟಿನ ಚಾಲಕ ತಿರುಪತಿ ಪೋನ್ ಮಾಡಿ ಸಮುದ್ರದಲ್ಲಿ ವಿಪರೀತ ಗಾಳಿ ಎದ್ದು ಬೋಟಿನಲ್ಲಿ ಸಮಸ್ಯೆ ಉಂಟಾಗಿ ಗಂಗೊಳ್ಳಿ ಬಂದರು ಕಡೆಗೆ ಬರುತ್ತಿರುವಾಗ ಬೋಟಿನ ಇಂಜಿನ್ ಸಮಸ್ಯೆಯಾಗಿ ಬೋಟನ್ನು ಸರಿಪಡಿಸಿಕೊಂಡು ವಾಪಾಸು ಗಂಗೊಳ್ಳಿ ಬಂದರಿಗೆ ಬರುತ್ತಿರುವಾಗ 10:30 ಗಂಟೆಗೆ ಬೋಟಿನಲ್ಲಿ ಕೆಲಸ ಮಾಡುತ್ತಿರುವ ವಯಾಲ್ ರವಿ (21) ಎಂಬುವವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿರುತ್ತಾರೆ, ಮೀನುಗಾರರು ಕೂಡಲೆ ಸಮುದ್ರದ ನೀರಿನಲ್ಲಿ ಹುಡುಕಿದಲ್ಲಿ ಸಿಕ್ಕಿರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ Zero FIR ನಂಬ್ರ 01/2025 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.