ಪಡುಬಿದ್ರಿ: ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದ 48 ವರ್ಷದ ವಿಶ್ವನಾಥ ಎಂಬವರು ನಾಪತ್ತೆಯಾಗಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ವಿಶ್ವನಾಥ ಅವರು ಹುಟ್ಟಿನಿಂದಲೇ ಬುದ್ಧಿಮಾಂದ್ಯರಾಗಿದ್ದು, ತಮ್ಮ ಮಾಧವ (56) ಅವರ ಮನೆಯಲ್ಲಿ ವಾಸವಾಗಿದ್ದರು. ದಿನಾಂಕ 30-10-2026 ರಂದು ಬೆಳಿಗ್ಗೆ 11 ಗಂಟೆಗೆ ಮುಲ್ಕಿಯ ಬಪ್ಪನಾಡು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದರು. ಆದರೆ, ಬಳಿಕ ಮನೆಗೆ ವಾಪಸಾಗಿರುವುದಿಲ್ಲ.
ವಿಶ್ವನಾಥ ಅವರು ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಈ ಹಿಂದೆ ಕೂಡ ಮನೆಯಿಂದ ತೆರಳಿ ಕೆಲವು ದಿನಗಳ ಬಳಿಕ ವಾಪಸಾಗಿದ್ದರಿಂದ ಕುಟುಂಬಸ್ಥರು ಈ ಬಾರಿಯೂ ಮರಳಬಹುದೆಂದು ನಿರೀಕ್ಷಿಸಿ ತಕ್ಷಣ ದೂರು ದಾಖಲಿಸಿರಲಿಲ್ಲ.
ಆದರೆ, ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ವಿಶ್ವನಾಥ ಅವರ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/2026, ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿರುತ್ತದೆ.
ನಾಪತ್ತೆಯಾದ ವ್ಯಕ್ತಿಯ ವಿವರ:
- ಹೆಸರು: ವಿಶ್ವನಾಥ
- ವಯಸ್ಸು: 48 ವರ್ಷ
- ವಿಳಾಸ: ಹೆಜಮಾಡಿ ಗ್ರಾಮ, ಕಾಪು ತಾಲೂಕು
- ಕೊನೆಯದಾಗಿ ಮನೆಯಿಂದ ತೆರಳಿದ ದಿನಾಂಕ: 30-10-2026
- ತೆರಳಿದ ಸ್ಥಳ: ಮುಲ್ಕಿ ಬಪ್ಪನಾಡು ದೇವಸ್ಥಾನ



