Home Crime ಹಿರಿಯಡ್ಕ: ಅಣ್ಣನ ಮನೆಗೆ ಹೋದ ವ್ಯಕ್ತಿ ನಾಪತ್ತೆ…!!

ಹಿರಿಯಡ್ಕ: ಅಣ್ಣನ ಮನೆಗೆ ಹೋದ ವ್ಯಕ್ತಿ ನಾಪತ್ತೆ…!!

ಹಿರಿಯಡ್ಕ: ಅಣ್ಣನ ಮನೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಅಂಬಡೆಕಲ್ಲು ದರ್ಖಾಸು ನಿವಾಸಿ ವಿನಯ್ ಶೆಟ್ಟಿ (39) ಎಂದು ಗುರುತಿಸಲಾಗಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಅಂಬಡೆಕಲ್ಲು ದರ್ಖಾಸು ನಿವಾಸಿ ವಿನಯ್ ಶೆಟ್ಟಿ (39) ಎಂದು ಗುರುತಿಸಲಾಗಿದೆ.

ವಿನಯ್ ಶೆಟ್ಟಿ ಅವರು ಅಕ್ಟೋಬರ್ 21ರಂದು ದೊಂಡೆರಂಗಡಿಯಲ್ಲಿರುವ ತಮ್ಮ ಅಣ್ಣ ರಾಜೇಶ್ ಶೆಟ್ಟಿ ಅವರ ಮನೆಗೆ ತೆರಳಿದ್ದರು.

ಬಳಿಕ ಅಣ್ಣ ಹಾಗೂ ಅತ್ತಿಗೆ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ವಿನಯ್ ಶೆಟ್ಟಿ ಅವರು ಮನೆಯಿಂದ ಹೊರಟು ಹೋಗಿದ್ದು, ನಂತರ ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದಾರೆ.

ಈ ಕುರಿತು ವಿನಯ್ ಶೆಟ್ಟಿ ಅವರ ಪತ್ನಿ ಅಶ್ವಿತಾ (35) ಅವರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.