ಉಡುಪಿ : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಕಳೆದ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕುಮಾರಿ ಸೃಷ್ಟಿ ಅರುಣ್ ಜೆ ಅವರು ಶೇ. 95.75 ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಅಮ್ಮುಂಜೆಯ ಗುರು ವಿದ್ವಾನ್ ಕೆ. ಭವಾನಿ ಶಂಕರ್ ಅವರ ಶಿಷ್ಯೆಯಾಗಿದ್ದು, ಉಪ್ಪೂರಿನ ಅರುಣ್ ಜೆ ಮತ್ತು ಶ್ರೀಮತಿ ಸುಚಿತ್ರಾ ಅರುಣ್ ದಂಪತಿಯ ಪುತ್ರಿಯಾಗಿದ್ದಾರೆ.



