Home Crime ಪಡುಬಿದ್ರಿ : ಮಹಿಳೆಯ ಕರಿಮಣಿ ಸರ ಎಗರಿಸಿ ಪರಾರಿಯಾದ ಕಳ್ಳರು…!!

ಪಡುಬಿದ್ರಿ : ಮಹಿಳೆಯ ಕರಿಮಣಿ ಸರ ಎಗರಿಸಿ ಪರಾರಿಯಾದ ಕಳ್ಳರು…!!

ಪಡುಬಿದ್ರಿ: ಮಹಿಳೆಯೋರ್ವರು ಕಸ ಎಸೆಯಲು ಮನೆಯ ಗೇಟ್ ಹೊರಗಡೆ ಬಂದಾಗ ಕಳ್ಳರು ಅವರ ಕರಿಮಣಿ ಸರ ಎಗರಿಸಿ ಎಸ್ಕೇಪ್ ಆದ ಘಟನೆ ಹೆಜಮಾಡಿಯ ಅಮಾವಾಸ್ಯೆಕರಿ ಎಂಬಲ್ಲಿನ ಖಾಸಗಿ ರೆಸಾರ್ಟ್ ನ ಬಳಿ ನಡೆದಿದೆ.

ತುಳಸಿ (52) ಎಂಬವರು ಚಿನ್ನದ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಎಂದು ಮಾಹಿತಿ ತಿಳಿಯಲಾಗಿದೆ.

ಕರಿಮಣಿ ಸರ ಎಳೆದ ರಭಸಕ್ಕೆ ಮಹಿಳೆ ಆಯತಪ್ಪಿ ಬಿದ್ದಿದ್ದಾರೆ. ಕಸ ಎಸೆಯಲು ಹೊರಗಡೆ ಬಂದಾಗ ಆ ಇಬ್ಬರು ಖದೀಮರು ಬೈಕ್ ನಲ್ಲಿ ಬಂದು ಅಲ್ಲೇ ಹೊಂಚು ಹಾಕುತ್ತಿದ್ದರು.

ಅವರಲ್ಲಿ ಒಬ್ಬ ಹೆಲ್ಮೆಟ್ ಧರಿಸಿದ್ದರೆ ಮತ್ತೊಬ್ಬ ಮಾಸ್ಕ್ ಧರಿಸಿದ್ದ. ಸರ ಎಳೆದ ಕೂಡಲೇ ಮಹಿಳೆ ಆಯತಪ್ಪಿ ಬಿದ್ದಿದ್ದು, ಎದ್ದೇಳುವಷ್ಟರಲ್ಲಿ ಆ ಕಳ್ಳರು ಪರಾರಿಯಾಗಿದ್ದರು. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.