ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಬಳಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಸಹಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅ.25 ರಂದು ಸಂಜೆ ನಡೆದಿದೆ.
ಮೃತರು ಬಿಜಾಪುರ ಮೂಲದ ಸುನೀಲ್ ಪಾಟೀಲ್ (19). ಗಂಭೀರ ಗಾಯಾಳು ಅನಂತಪದ್ಮನಾಭ ಭಟ್.
ಶಿರ್ವಾ ಗ್ರಾಮದ ಶೇಯಸ್ (27) ಅವರು ಅನಂತಪದ್ಮನಾಭ ಭಟ್ ಮತ್ತು ಅವರ ಮನೆಯಲ್ಲಿ ಖಾಯಂ ನಿವಾಸಿಯಾಗಿದ್ದ ಸುನೀಲ್ ಪಾಟೀಲ್ ಜೊತೆ ವಾಸವಾಗಿದ್ದಾರೆ.
ಅ.25 ರಂದು ಸಂಜೆ 6 ಗಂಟೆಗೆ ಅನಂತಪದ್ಮನಾಭ ಭಟ್ ಅವರು KA-20-EA-5194 ಬಜಾಜ್ ಮೋಟಾರ್ ಸೈಕಲ್‌ನಲ್ಲಿ ಸುನೀಲ್ ಪಾಟೀಲ್ ಅವರನ್ನು ಹಿಂಬದಿ ಸಹಸವಾರನಾಗಿ ಕೂರಿಸಿಕೊಂಡು ತೆರಳುತ್ತಿದ್ದರು. ಸಂಜೆ 6:30ಕ್ಕೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಟಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಕಟಪಾಡಿ ವಿಜಯ ಇಂಡಸ್ಟ್ರಿ ಬಳಿ ಹಿಂದಿನಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ PB-13-BH-9671 ಕಾರು ಬೈಕ್‌ನ ಹಿಂಬದಿ ಫುಟ್‌ರೆಸ್ಟ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಬಲಬದಿಗೆ ತಿರುಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸುನೀಲ್ ಪಾಟೀಲ್ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅನಂತಪದ್ಮನಾಭ ಭಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ.


