Home Crime ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕನ ಮೊಬೈಲ್ ಕಳವು : UPI ಮೂಲಕ ₹19,847 ಹಣ ವರ್ಗಾವಣೆ…!!

ಬೈಂದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕನ ಮೊಬೈಲ್ ಕಳವು : UPI ಮೂಲಕ ₹19,847 ಹಣ ವರ್ಗಾವಣೆ…!!

ಬೈಂದೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗೋವಾ ಮೂಲದ ಯುವಕನ ಮೊಬೈಲ್ ಕಳವು ಮಾಡಿ, ಅದರ ಮೂಲಕ UPI ಪಾವತಿ ವ್ಯವಸ್ಥೆಯಲ್ಲಿ ₹19,847 ಹಣವನ್ನು ವರ್ಗಾವಣೆ ಮಾಡಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವಾದ ಕೌಂಕೋಲಿಮ್, ಸಾಲ್ಸೆಟ್ಟೆ ನಿವಾಸಿ ರೂಬೆನ್ ಫರ್ನಾಂಡಿಸ್ (25) ಅವರು 2026ರ ಆಗಸ್ಟ್ 2ರಂದು ಮಂಗಳೂರಿನಿಂದ ಮಡಗಾಂವ್ ರೈಲು ನಿಲ್ದಾಣಕ್ಕೆ MAJN ADI ರೈಲು ಸಂಖ್ಯೆ 09423ರಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನ S3 ಕೋಚ್‌ನ 70ನೇ ಬರ್ತ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಬೆಳಗಿನ ಜಾವ ಸುಮಾರು 2 ಗಂಟೆಗೆ ಬೈಂದೂರು ರೈಲು ನಿಲ್ದಾಣದ ಬಳಿ ಅವರ ಬಳಿ ಇದ್ದ Motorola G ಮೊಬೈಲ್ ಅನ್ನು ಯಾರೋ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳವಾದ ಮೊಬೈಲ್‌ನ ಅಂದಾಜು ಮೌಲ್ಯ ₹17,000 ಆಗಿದ್ದು, ಮೊಬೈಲ್ ಕಳವು ಮಾಡಿದ ಬಳಿಕ ಅದರ ಮೂಲಕ ಕಾನೂನುಬಾಹಿರವಾಗಿ UPI ಮೂಲಕ ₹19,847 ಹಣ ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.