Home Crime ಹೆಬ್ರಿ : ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು…!!

ಹೆಬ್ರಿ : ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು…!!

ಉಡುಪಿ : ಹಾವೇರಿ ಜಿಲ್ಲೆ ಬ್ಯಾಡಗಿ ಮುತ್ತಲಪೂರ ನಿವಾಸಿ ಭರಮಪ್ಪ ಹನುಮಂತಪ್ಪ ಗೋಡೆರ (51) ಎಂಬ ವ್ಯಕ್ತಿಯು ಕೂಲಿ ಕೆಲಸದ ನಿಮಿತ್ತ ಹೆಬ್ರಿಯಿಂದ ಕಾರ್ಕಳಕ್ಕೆ ಹೋಗುವ ಬಸ್‌ನಲ್ಲಿ ಸಂಚರಿಸುವಾಗ ಮಾರ್ಗಮಧ್ಯದಲ್ಲಿ ಬಸ್‌ನಿಂದ ಇಳಿದು ಹೋದವರು ಈವರೆಗೂ ಪತ್ತೆಯಾಗಿರುವುದಿಲ್ಲ.

5 ಅಡಿ 5 ಇಂಚು ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಪೊಲೀಸ್ ಠಾಣೆ ದೂ.ಸಂಖ್ಯೆ: 08253-251116, ಪಿ.ಎಸ್.ಐ ಮೊ.ನಂ: 9480805463, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08258-23108, ಮೊ.ನಂ: 9480805435 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹೆಬ್ರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.