Home Crime ಕುಂದಾಪುರ: ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಸೈಬರ್ ವಂಚನೆ – ಹಿರಿಯ ನಾಗರಿಕನಿಗೆ ಲಕ್ಷಾಂತರ ರೂ. ನಷ್ಟ…!!

ಕುಂದಾಪುರ: ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಸೈಬರ್ ವಂಚನೆ – ಹಿರಿಯ ನಾಗರಿಕನಿಗೆ ಲಕ್ಷಾಂತರ ರೂ. ನಷ್ಟ…!!

ಕುಂದಾಪುರ: ಕ್ರೆಡಿಟ್ ಕಾರ್ಡ್ ನೀಡುವ ನೆಪದಲ್ಲಿ ಅಪರಿಚಿತರು ಹಿರಿಯ ನಾಗರಿಕರಿಗೆ 2.24 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

68 ವರ್ಷದ ಶೇಖರ್ ಎಂಬುವವರಿಗೆ ಅ.21 ರಂದು ಮಧ್ಯಾಹ್ನ 12 ಗಂಟೆಗೆ ಹಿಂದಿಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ, ನೀವು ಸೀನಿಯರ್ ಸಿಟಿಜನ್ ಆಗಿರುವುದರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ನೀಡುತ್ತೇವೆ ಎಂದು ನಂಬಿಸಿ ಕ್ರೆಡಿಟ್ ಕಾರ್ಡ್ ವಿವರ ಪಡೆದು, PNB CREDIT http://CARD.apk ಎಂಬ ಫೈಲ್ ಕಳುಹಿಸಿದ್ದಾರೆ. ಜೊತೆಗೆ ಬ್ಯಾಂಕ್ ಆಫ್ ಬರೋಡಾ ಕಾರ್ಡ್ ವಿವರವನ್ನೂ ಕೇಳಿದ್ದಾರೆ.

ಸಂಜೆ 4 ಗಂಟೆಗೆ ಮೊಬೈಲ್ ಇನ್ ಬಾಕ್ಸ್ ಪರಿಶೀಲಿಸಿದಾಗ OTP ಶೇರ್ ಆಗಿರುವುದು ಕಂಡುಬಂದಿದ್ದು, ಅವರ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ನಿಂದ 1,30,490 ರೂ., 22,167 ರೂ., 10,000 ರೂ. ಹಾಗೂ RBL (ರತ್ನಾಕರ ಬ್ಯಾಂಕ್ ಲಿಮಿಟೆಡ್) ಕ್ರೆಡಿಟ್ ಕಾರ್ಡ್ ನಿಂದ 3,468.34 ರೂ., 20,000 ರೂ., 37,999 ರೂ. ಸೇರಿ ಒಟ್ಟು 2,24,124.34 ರೂಪಾಯಿಯನ್ನು ಸೈಬರ್ ಖದೀಮರು ವರ್ಗಾಯಿಸಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2026 ಕಲಂ 66(C), 66(D) IT Act ರಂತೆ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಿಗೆ ಎಚ್ಚರಿಕೆ: ಅಪರಿಚಿತರು ಕಳುಹಿಸುವ APK ಫೈಲ್ ಗಳನ್ನು ಇನ್ ಸ್ಟಾಲ್ ಮಾಡಬೇಡಿ, OTP ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.