ಮೂಡುಬೆಳ್ಳೆ-ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಮೂಡುಬೆಳ್ಳೆ ( ಜಿಐಇ- ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ಉಡುಪಿ ಇದರ ಅಂಗ ಸಂಸ್ಥೆ) ಇಲ್ಲಿ ನನ್ನ ಭಾರತಕ್ಕಾಗಿ ಯುವ ಜನತೆ ಎಂಬ ಘೋಷ ವಾಕ್ಯದೊಂದಿಗೆ ನಡೆದ ರಾಷ್ಟ್ರೀಯ ಸೇವಾ ಯೋಜನೆಯ 10ನೇ ವರ್ಷದ ವಾರ್ಷಿಕ ವಿಶೇಷ ಶಿಬಿರ 2026 ಇದರ ಸಮಾರೋಪ ಸಮಾರಂಭ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮರ್ಣೆ ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಯಾದವ ದೇವಾಡಿಗ ಅಧ್ಯಕ್ಷರು ಜನರಲ್ ಇನ್ಸುರೆನ್ಸ್ ಎಂಪ್ಲಾಯಿಸ್ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಲಿ. ಉಡುಪಿ ಹಾಗೂ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆ ಇವರು ತಮ್ಮ ಕೆಲಸದಿಂದ ಎಲ್ಲರ ಮನಸ್ಸನ್ನು ಪ್ರೀತಿ ಪಾತ್ರರಾದ ವಿದ್ಯಾರ್ಥಿಗಳನ್ನು ಹರಿಸಿ ಹಾರೈಸಿ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರ ಹಾಕುವುದಕ್ಕೆ ಸಹಕಾರಿಯಾಗುತ್ತದೆ.ಇದರಿಂದ ಸೇವೆ,ಸಹಕಾರ, ಹಿರಿಯರಿಗೆ ಗೌರವ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಇಂದಿನ ನಮ್ಮ ಕಾರ್ಯಕ್ರಮದಲ್ಲಿ ಸನ್ಮಾನಗೊಂಡ ಶ್ರೀ ಕೇಶವ ಆಚಾರ್ಯ ಮರ್ಣೆ, ಅಲಂಕಾರ ಹಾಗೂ ಶಿಲ್ಪ ಕಲಾವಿದರು
ಪ್ರೀತಿಯಿಂದ ಸರ್ವರನ್ನು ಹರಸಿ ಹಾರೈಸಿದರು.
ಕಾರ್ಯಕ್ರಮದ ಅಭ್ಯಾಗತರಾದ
ಶ್ರೀ ಸುರೇಶ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಮಣಿಪುರ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಂಘಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಶ್ರೀ ಯು.ಎಲ್. ಭಟ್ ವಿಶ್ರಾಂತ ಪ್ರಾಂಶುಪಾಲರು, ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆ ಇವರು ರಾಷ್ಟ್ರೀಯ ಸೇವಾ ಯೋಜನೆ, ನಮಗೆ ನಾಯಕತ್ವ, ವ್ಯಕ್ತಿತ್ವ ವಿಕಸನ ಹಾಗೂ ಅವಕಾಶವನ್ನು ಕೊಡುತ್ತದೆ ಅಂತಹುದನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ತಮ್ಮ ಜೀವನದಲ್ಲಿ ಉನ್ನತ ಸ್ಥಾನವನ್ನು ಹೊಂದಲಿ ಎಂದು ಹೇಳಿದರು.
ಶ್ರೀಮತಿ ಸ್ಯಾಂಡ್ರಾ ಲೂಸಿಕಾ ಲೋಬೋ ಮುಖ್ಯೋಪಾಧ್ಯಾಯನಿ, ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ಮೂಡುಬೆಳ್ಳೆ ಇವರು ಶಿಬಿರದಲ್ಲಿ ಹೊಸ ವಿಚಾರಗಳನ್ನು ಕಲಿತ ವಿದ್ಯಾರ್ಥಿಗಳು ಅದನ್ನು ಅವರ ಜೀವನದುದ್ದಕ್ಕೂ ಪಾಲಿಸಿ ಸಮಾಜಕ್ಕೆ, ದೇಶಕ್ಕೆ, ಉತ್ತಮ ಪ್ರಜೆಗಳಾಗಿ ಬೆಳೆಯಲಿ ಎಂದು ಹೇಳಿದರು.
ಶ್ರೀ ದಯಾನಂದ ನಾಯಕ್ ಸಂಚಾಲಕರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮರ್ಣೆ ಇವರು ಅವಕಾಶಗಳು ನಮ್ಮ ಮನೆ ಬಾಗಿಲಿಗೆ ಬಂದಾಗ ಅದನ್ನು ಬಾಚಿಕೊಂಡು ಮನೆಯವರಿಗೆ, ಶಾಲೆಗೆ, ಊರಿಗೆ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀ ಕೃಷ್ಣ ನಾಯ್ಕ್ ಮುಖ್ಯೋಪಾಧ್ಯಾಯರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮರ್ಣೆ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮರ್ಣೆ ಇಲ್ಲಿಗೆ ವಿದ್ಯಾರ್ಥಿಗಳೆಲ್ಲರಿಗೂ ಸದಾ ಸ್ವಾಗತ, ನಿಮ್ಮ ಮನೆ ಎಂದೇ ಭಾವಿಸಿ ಎಂದು ಪ್ರೀತಿಯಿಂದ ಹರಸಿ ಹಾರೈಸಿದರು.
ಶ್ರೀ ಪ್ರಭಾಕರ ಕೆ.ಎಸ್ ಪ್ರಭಾರ ಕಾರ್ಯದರ್ಶಿ ಜನರಲ್ ಇನ್ಸುರೆನ್ಸ್ ಎಂಪ್ಲಾಯಿಸ್ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಲಿ. ಉಡುಪಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶಿಬಿರದ ಯಶಸ್ಸಿಗೆ ಶ್ರಮಿಸಿದ ಸರ್ವರನ್ನೂ, ಅವರ ಶ್ರಮವನ್ನು ಗುರುತಿಸಿ ಗೌರವಿಸಿದರು.
ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾ ಎಸ್ ನಾಯಕ್ ಇವರು ಸರ್ವರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದ ಹಾಗೂ ಶಿಬಿರದ ಯೋಜನಾಧಿಕಾರಿಗಳಾದ ಶ್ರೀ ಭಾಸ್ಕರ್ ಆಚಾರ್ಯ ಇವರು ಏಳು ದಿನದ ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮದ ವರದಿಯನ್ನು ಅತಿಥಿ ಗಣ್ಯರ ಮುಂದೆ ವಾಚಿಸುವುದರೊಂದಿಗೆ ಆಗಮಿಸಿದ ಸರ್ವರನ್ನು ಗುರುತಿಸಿ, ಶಿಬಿರದ ಯಶಸ್ಸಿಗೆ ಕಾರಣೀಕರ್ತರಾದ ಸರ್ವರಿಗೂ ವಂದಿಸಿದರು.
ಕುಮಾರಿ ರಂಜಿತಾ ಗಣಕ ವಿಜ್ಞಾನ ಉಪನ್ಯಾಸಕಿ ಇವರು ಸನ್ಮಾನಿತರ ಪರಿಚಯವನ್ನು ವಾಚಿಸಿದರು.
ಏಳು ದಿನಗಳ ಕಾಲ ಮನೆಯಿಂದ ದೂರವಿದ್ದು, ಶ್ರಮವಹಿಸಿ ಶಿಬಿರದ ವಿದ್ಯಾರ್ಥಿಗಳು ಮಾಡಿದ ಕೆಲಸಗಳನ್ನು ಗುರುತಿಸಿ ಅವರಿಗೆ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರ ಸಮ್ಮುಖದಲ್ಲಿ ಬಹುಮಾನ ನೀಡಲಾಯಿತು.
ತ್ರಿಷಾ, ಆರ್ಯನ್ ಶೆಟ್ಟಿ, ಹರ್ಷಿತಾ ಹಾಗೂ ಶಾನ್ ಇವರು ಏಳು ದಿನಗಳ ಕಾಲ ನಡೆದ ಶಿಬಿರದ ಅನುಭವವನ್ನು ತಮ್ಮ ಮಾತಿನಲ್ಲಿ ಎಲ್ಲರೊಂದಿಗೆ ಹಂಚಿಕೊಂಡರು.
ವಿದ್ಯಾರ್ಥಿನಿಯರು ರಾಷ್ಟ್ರೀಯ ಸೇವಾ ಯೋಜನೆಯ ಸುಂದರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ದಿವ್ಯಾ ಇವರು ಕಾರ್ಯಕ್ರಮ ನಿರೂಪಿಸಿದರು.




