ಉಡುಪಿ: ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ರೂಡಿ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, 85,000 ರೂ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ದಿನಾಂಕ 17-10-2026 ರಂದು ರಾತ್ರಿ 10:30ಕ್ಕೆ ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಗ್ಗೆ PSI ಭರತೇಶ್ ಕಂಕಣವಾಡಿ ಅವರಿಗೆ ಖಚಿತ ಮಾಹಿತಿ ಬಂದಿತ್ತು. ಕೂಡಲೇ ದಾಳಿ ನಡೆಸಿದಾಗ KA-20-EG-7918 ಸ್ಕೂಟರ್ನಲ್ಲಿ MDMA ಮಾರಾಟಕ್ಕೆ ನಿಂತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಬಂಧಿತನನ್ನು ವಿಜಯ್ @ ವಿಜಯ್ ಪೂಜಾರಿ (36), ತಂದೆ ದಿ. ಸದಾಶಿವ ಪೂಜಾರಿ, ವಾಸ ಅಂಕುದ್ರು ಉದ್ಯಾವರ, ಕಾಪು ತಾಲೂಕು ಎಂದು ಗುರುತಿಸಲಾಗಿದೆ.
ವಶಪಡಿಸಿಕೊಂಡ ಸೊತ್ತು:
- 17.66 ಗ್ರಾಂ ತೂಕದ 09 ಜಿಪ್ ಕವರ್ಗಳಲ್ಲಿ Amphetamine/Methamphetamine – ಅಂದಾಜು ಮೌಲ್ಯ ರೂ.35,000
- ತೂಕದ ಯಂತ್ರ – ರೂ.2,000
- 7 ಖಾಲಿ ಜಿಪ್ ಕವರ್ಗಳು
- 2.18 ಗ್ರಾಂ ಬಿಳಿ ಬಣ್ಣದ ಮಾತ್ರೆ ಮತ್ತು ಪೌಡರ್
- ವಿವೋ Y16 ಮೊಬೈಲ್ – ರೂ.8,000
- ಕೃತ್ಯಕ್ಕೆ ಬಳಸಿದ ಸುಜುಕಿ ಆಕ್ಸೆಸ್ 125 ಸ್ಕೂಟರ್ – ರೂ.40,000
ಉಡುಪಿ ನಗರ ಠಾಣೆಯಲ್ಲಿ ಅ.ಕ್ರ 141/2026, ಕಲಂ 8(c), 22(b) NDPS ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, PSI ರತ್ನಾಕರ್ ಕೆ. ತನಿಖೆ ಕೈಗೊಂಡಿದ್ದಾರೆ.
ರೂಡಿ ಆರೋಪಿ:
ಈತನ ವಿರುದ್ಧ ಈಗಾಗಲೇ 4 ಪ್ರಕರಣಗಳು ದಾಖಲಾಗಿವೆ:
1) ಉಡುಪಿ ನಗರ 95/2026 – NDPS
2) ಉಡುಪಿ ನಗರ 92/2025 – NDPS
3) ಉಡುಪಿ ನಗರ 192/2025 – SC/ST + BNS
4) ಕಾಪು 147/2026 – NDPS
ಸೆ.24 ರಂದು ಹಿರಿಯಡ್ಕ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಮತ್ತೆ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ.
ಈ ಕಾರ್ಯಾಚರಣೆ DYSP ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಪಿ ನೇತೃತ್ವದಲ್ಲಿ PSI ಭರತೇಶ್ ಕಂಕಣವಾಡಿ, PSI ರತ್ನಾಕರ್ ಮತ್ತು ಸಿಬ್ಬಂದಿ ಜೀವನ್ ಕುಮಾರ್, ಆನಂದ ಗಾಣಿಗ, ಪ್ರಸನ್ನ ಸಿ, ಹೇಮಂತ್, ಓಬಳೇಶ, ಆನಂದಯ್ಯ ಅವರು ನಡೆಸಿದ್ದಾರೆ.





