ಉಡುಪಿ, ಅ.18: ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ (ರಿ) ಉಡುಪಿ ಘಟಕದ ಮಾಜಿ ಅಧ್ಯಕ್ಷ ದಿ. ಕಿಶೋರ್ ಪೂಜಾರಿ ಅವರ ನೆನಪಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಉಡುಪಿ ಘಟಕದ ಆಶ್ರಯದಲ್ಲಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಮತ್ತು ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ದಿನಾಂಕ 17-10-2026 ಶನಿವಾರ ಶಿಬಿರ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿರುವೆರ್ ಕುಡ್ಲ ಉಡುಪಿ ಘಟಕದ ಅಧ್ಯಕ್ಷ ಯೋಗೀಶ್ ಅಮೀನ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್, ರಕ್ತನಿಧಿ ವಿಭಾಗದ ಡಾ. ನಿಖಿತಾ, ಸತೀಶ್ ಪೂಜಾರಿ ಕಡೆಕಾರ್, ಮಂಜುನಾಥ್ ಚೇರ್ಕಾಡಿ, ಧ್ಯಾನ್ ಕಿಶೋರ್ ಪೂಜಾರಿ, ರಾಜೇಶ್ ಕೊಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತೇಜೇಶ್ ಜೆ. ಬಂಗೇರ ನಿರೂಪಿಸಿ ವಂದಿಸಿದರು.










