ಬಂಟ್ವಾಳ, ಅ.16: ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಕಳ್ಳರು ಹಿಂಬಾಗಿಲು ಮೂಲಕ ಪ್ರವೇಶಿಸಿ 3.62 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಘಟನೆ ಕೊಲ್ನಾಡು ಗ್ರಾಮದ ಮೊಂತಿಮಾರು ನೊಳದಲ್ಲಿ ನಡೆದಿದೆ.
ಕೊಲ್ನಾಡು ಗ್ರಾಮದ ಪುದ್ದೋಟ್ಟು ಮನೆಯ ಮೊಹಮ್ಮದ್ ರಿಯಾಜ್ (34) ಅವರು ಮನೆಯ ಹಿಂಬದಿಯಲ್ಲಿ ‘ವಾಹ’ ಎಂಬ ಸಾಫ್ಟ್ ಡ್ರಿಂಕ್ಸ್ ತಯಾರಿಕಾ ಘಟಕ ನಡೆಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ತಯಾರಿಕೆ ಮಾಡಿ ಮಧ್ಯಾಹ್ನ 3 ಗಂಟೆಯ ನಂತರ ಸೇಲ್ ಮಾಡುತ್ತಾರೆ.
ಅ.14 ರಂದು ಬೆಳಿಗ್ಗೆ 11:30ಕ್ಕೆ ಕೆಲಸ ಮುಗಿಸಿ ಹಿಂಬಾಗಿಲಿನ ಡ್ರಿಲ್ ಬಾಗಿಲಿನ ಚಿಲಕ ಒಳಗಡೆಯಿಂದ ಹಾಕಿ, ಮುಂಬಾಗಿಲಿಗೆ ಬೀಗ ಹಾಕಿ ಪತ್ನಿ, ಮಕ್ಕಳೊಂದಿಗೆ ಪತ್ನಿಯ ಮನೆ ಮೊಂಟುಗೋಳಿಗೆ ಹೋಗಿದ್ದರು.
ಅ.15 ರಂದು ಬೆಳಿಗ್ಗೆ 10:30ಕ್ಕೆ ವಾಪಸ್ ಬಂದು ಬೀಗ ತೆಗೆದು ಒಳಗೆ ನೋಡಿದಾಗ ಬಟ್ಟೆ-ಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಗಾಡ್ರೇಜ್ ತೆರೆದು ಬಟ್ಟೆ ಹೊರಗೆ ಬಿದ್ದಿರುವುದು ಕಂಡುಬಂದಿದೆ. ಗಾಡ್ರೇಜ್ ಮೇಲಿದ್ದ ಕೀ ಸಹಾಯದಿಂದ ಕಪಾಟು ತೆರೆದು ಒಳಗಿದ್ದ ಹ್ಯಾಂಡ್ ಬ್ಯಾಗ್ ಕಳವು ಮಾಡಿರುವುದು ಗೊತ್ತಾಗಿದೆ.
ಕಳವಾದ ವಸ್ತುಗಳು 2 ಗ್ರಾಂನ 3 ಚಿನ್ನದ ಉಂಗುರಗಳು – 72,000 ರೂ, 8 ಗ್ರಾಂನ ಬ್ರೇಸ್ಲೈಟ್ – 96,000 ರೂ,8 ಗ್ರಾಂನ ಕಿವಿಯೋಲೆ – 96,000 ರೂ, 2 ಗ್ರಾಂನ ಸಣ್ಣ ಕಿವಿಯೋಲೆ – 24,000 ರೂ,2 ಗ್ರಾಂನ ಟಿಕ್ಕಿ – 24,000 ರೂ,4 ಗ್ರಾಂನ ನೆಕ್ಲೆಸ್ – 48,000 ರೂ,ನಗದು 2,000 ರೂ ಒಟ್ಟು: 30 ಗ್ರಾಂ ಚಿನ್ನ (3.60 ಲಕ್ಷ) + 2,000 ನಗದು = 3.62 ಲಕ್ಷ ರೂ ಎಂದು ತಿಳಿಯಲಾಗಿದೆ.
ಕಳ್ಳರು ಹಿಂಬಾಗಿಲಿನ ಚಿಲಕಕ್ಕೆ ಕೈ ಹಾಕಿ ಒಳಗಿನಿಂದ ತೆರೆದು ಪ್ರವೇಶಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 137/2026 ಕಲಂ 305, 331(3), 331(4) BNS ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



