Home Karkala News ಕಾರ್ಕಳ : ಕರಿಯಕಲ್ಲು ಡಂಪಿಂಗ್‌ ಯಾರ್ಡ್‌ಗೆ ಬೆಂಕಿ…!!

ಕಾರ್ಕಳ : ಕರಿಯಕಲ್ಲು ಡಂಪಿಂಗ್‌ ಯಾರ್ಡ್‌ಗೆ ಬೆಂಕಿ…!!

ಕಾರ್ಕಳ : ಕರಿಯಕಲ್ಲು ಡಂಪಿಂಗ್‌ ಯಾರ್ಡ್‌ಗೆ ಜು. 9ರ ರಾತ್ರಿ ಬೆಂಕಿ ಹತ್ತಿಕೊಂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ತುಂಬಿದ್ದ ಕಸಕ್ಕೆ ಬೆಂಕಿ ಆವರಿಸುತ್ತಾ ಹೋಗಿದ್ದು, ಹೊಗೆ ತುಂಬಿಕೊಂಡಿತ್ತು. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಕೆಲಕಾಲ ಹರಸಾಹಸ ಪಡಬೇಕಾಯಿತು.

ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಹರಿಪ್ರಸಾದ್, ಶ್ರೀಧರ್ ಭೀಮಪ್ಪ, ಬಸವರಾಜ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.