Home Crime ಕಾವೂರು: ಮಾದಕ ವಸ್ತು ಸೇವನೆ ಆರೋಪ : ಏಳು ಮಂದಿ ವಿರುದ್ಧ ಪ್ರಕರಣ…!!

ಕಾವೂರು: ಮಾದಕ ವಸ್ತು ಸೇವನೆ ಆರೋಪ : ಏಳು ಮಂದಿ ವಿರುದ್ಧ ಪ್ರಕರಣ…!!

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಏಳು ಮಂದಿ ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಕಾವೂರು ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಧ್ಯಾಹ್ನ 3.45ರ ಸುಮಾರಿಗೆ ಕಾವೂರು ಪೊಲೀಸ್ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ್ ಬಿರಾದಾರ್ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಪಂಜಿಮೊಗರು ಬಸ್‌ಸ್ಟಾಪ್ ಬಳಿ ಏಳು ಮಂದಿ ಅನುಮಾನಾಸ್ಪದವಾಗಿ ನಿಂತಿರುವುದನ್ನು ಗಮನಿಸಿದ್ದಾರೆ.

ಪೊಲೀಸರು ವಿಚಾರಿಸಿದಾಗ ಅವರ ಮಾತುಗಳು ತೊದಲುತ್ತಿದ್ದು, ಮಾದಕ ವಸ್ತು ಸೇವಿಸಿರುವಂತೆ ಕಂಡುಬಂದಿದೆ ಎನ್ನಲಾಗಿದೆ. ವಿಚಾರಣೆಯಲ್ಲಿ ಅವರು ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬಳಿಕ ಏಳು ಮಂದಿಯನ್ನು ವಶಕ್ಕೆ ಪಡೆದು ಎ.ಜೆ. ಆಸ್ಪತ್ರೆಯ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಯ ಬಳಿಕ ಆಸಿಫ್ ಮೊಹಮ್ಮದ್ ಕೆ. (25), ಕ್ರಿಸ್ಟೋಪರ್ ಜಾರ್ಜ್ (22), ಜಿತಿನ್ (19), ಮೊಹಮ್ಮದ್ ಜಮೀನ್ (22), ಮಿಥುನ್ ಲಾಲ್ (22), ನಾಜೀ ಸೊಬೇರಿ ಸಿ.ಎಂ. (23) ಹಾಗೂ ಅಮಲ್ ದೇವ್ (21) ಮಾದಕ ವಸ್ತು ಸೇವಿಸಿರುವುದಾಗಿ ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 27(b) ಅಡಿಯಲ್ಲಿ ಕಾವೂರು ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.