Home Crime ಪಡುಬಿದ್ರಿ: ಸೆಂಟ್ರಿಂಗ್ ಕಾರ್ಮಿಕನ ಮೇಲೆ ಹಲ್ಲೆ : ವೆನ್ಲಾಕ್ ಆಸ್ಪತ್ರೆಗೆ ದಾಖಲು…!!

ಪಡುಬಿದ್ರಿ: ಸೆಂಟ್ರಿಂಗ್ ಕಾರ್ಮಿಕನ ಮೇಲೆ ಹಲ್ಲೆ : ವೆನ್ಲಾಕ್ ಆಸ್ಪತ್ರೆಗೆ ದಾಖಲು…!!

ಪಡುಬಿದ್ರಿ: ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು, ಸೆಂಟ್ರಿಂಗ್ ಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಪಡುಬಿದ್ರಿಯಲ್ಲಿ ಸಂಭವಿಸಿದೆ.

ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರೆ ಬೂಡು ಎಂಬಲ್ಲಿ ರೆಸಾರ್ಟ್ ಕಾಮಗಾರಿ ನಡೆಯುತ್ತಿದ್ದು, ಉತ್ತರಾಖಂಡ ಮೂಲದ ಅಂಕಿತ್ (27) ಹಾಗೂ ಆರೋಪಿ ಅಜಯ್ ಮಾಳಸಿದ್ದಪ್ಪ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದರು.

ರಾತ್ರಿ ಸುಮಾರು 9.30ರ ವೇಳೆಗೆ ಅಜಯ್ ಯಾವುದೇ ಕಾರಣವಿಲ್ಲದೆ ಅಂಕಿತ್‌ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿ ಅಂಕಿತ್‌ಗೆ ಕೈಯಿಂದ ಗುದ್ದಿ, ಕಾಲಿನಿಂದ ತುಳಿದು ಕೆಳಗೆ ಬೀಳಿಸಿದ್ದಾನೆ.

ಬಳಿಕ ಮರದ ಹಲಗೆಯಿಂದ ಅಂಕಿತ್‌ನ ತಲೆ, ಮುಖ ಹಾಗೂ ಕಿವಿಯ ಬಳಿ ಹೊಡೆದು ಗಾಯಗೊಳಿಸಿದ್ದಾನೆ ಎನ್ನಲಾಗಿದೆ.

ಗಾಯಗೊಂಡ ಅಂಕಿತ್ ಅವರನ್ನು ಕೆಲಸದ ಮಾಲೀಕ ರಾಘವೇಂದ್ರ ಅವರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿದ್ದಾರೆ.

ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.