Home Crime ಮಣಿಪಾಲದಲ್ಲಿ ಇ-ಮೊಬಿಲಿಟಿ ಶುಲ್ಕದಲ್ಲಿ 12 ಲಕ್ಷ ರೂ. ವಂಚನೆ : 6‌ ಮಂದಿ ಆರೋಪಿಗಳು ಅರೆಸ್ಟ್…!!

ಮಣಿಪಾಲದಲ್ಲಿ ಇ-ಮೊಬಿಲಿಟಿ ಶುಲ್ಕದಲ್ಲಿ 12 ಲಕ್ಷ ರೂ. ವಂಚನೆ : 6‌ ಮಂದಿ ಆರೋಪಿಗಳು ಅರೆಸ್ಟ್…!!

ಮಣಿಪಾಲ: ನ‌ಗರದ ಎಂಐಟಿ ಕ್ಯಾಂಪಸ್ ಒಳಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಚಾರಕ್ಕಾಗಿ ಬ್ಯಾಟರಿ ಚಾಲಿತ ವಾಹನ ಸೇವೆ ನಡೆಸುತ್ತಿದ್ದ ಕಂಪನಿಗೆ 12 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ಮಣಿಪಾಲ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Indeanta E-Mobility Pvt. Ltd ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:
ಎಂಐಟಿ ಕ್ಯಾಂಪಸ್, ಶಿವಳ್ಳಿ ಗ್ರಾಮ, ಉಡುಪಿ ತಾಲೂಕಿನಲ್ಲಿ Indeanta E-Mobility Pvt.Ltd ಕಂಪನಿಯು ಬ್ಯಾಟರಿ ಚಾಲಿತ ವಾಹನ ಸೇವೆ ನಡೆಸುತ್ತಿದೆ. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 1. ಸಿದ್ದಮೂರ್ತಿ ಜಿ 2. ಶಿವರಾಜ್ ನಾಯಕ್ 3. ಸುದೀಪ್ 4. ಜಿತೇಶ್ ಎಲ್ ಕಾಂಚನ್ 5. ಎಂ ಬಿ ಅವಿನಾಶ್ 6. ಮುತ್ತಣ್ಣ ಅಡಿನವರ್ 7. ಐಶ್ವರ್ಯ ಮುತ್ತಣ್ಣ ಅಡಿನವರ್
ಎಂಬುವವರು 01.04.2026 ರಿಂದ ಪ್ರಯಾಣಿಕರಿಂದ ಪಡೆದ ಶುಲ್ಕವನ್ನು ಕಂಪನಿಗೆ ನೀಡದೇ, ಕಂಪನಿಯ QR ಕೋಡ್ ಬಳಸದೇ, ನಕಲಿ ವ್ಯವಹಾರ ಖಾತೆ ತೆರೆದು ವೈಯಕ್ತಿಕ ಮರ್ಚೆಂಟ್ QR ಕೋಡ್ ಸೃಷ್ಟಿಸಿದ್ದಾರೆ. ಪ್ರಯಾಣಿಕರು ಪಾವತಿಸಿದ ಹಣವನ್ನು ಸಂಗ್ರಹಿಸಿ 12,00,000 ರೂ.ಗಳನ್ನು ಮುತ್ತಣ್ಣ ಅಡಿನವರ್ ಅವರ ಪತ್ನಿ ಐಶ್ವರ್ಯ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ಹಂಚಿಕೊಂಡು ವಂಚನೆ, ಮೋಸ ಮತ್ತು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ದೂರನ್ನು ಮಣಿಪಾಲ ಠಾಣೆಯ ಪಿಎಸ್ಐ (ತನಿಖೆ) ಶಂಭುಲಿಂಗಯ್ಯ ಎಂ. ಅವರು ಸ್ವೀಕರಿಸಿ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 161/2026 ಕಲಂ 316(4), 316(5), 318(2), 318(3), 318(4) ಹಾಗೂ 3(5) BNS ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತನಿಖೆ ಮುಂದುವರಿಸಿದ ಪೊಲೀಸರು ದಿನಾಂಕ 02/10/2026 ರಂದು 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳು ಸಿದ್ದಮೂರ್ತಿ ಜಿ (29) – ಕೂಡ್ಲಿಗಿ ತಾಲೂಕು, ವಿಜಯನಗರ ಜಿಲ್ಲೆ. ಸದ್ಯ ಪೆರಂಪಳ್ಳಿ ನಿವಾಸಿ, ಶಿವರಾಜ್ ನಾಯ್ಕ (30) – ಆತ್ರಾಡಿ, ಉಡುಪಿ,ಸುದೀಪ್ (30) – ಮೊಳಕಾಲ್ಮುರು ತಾಲೂಕು, ಚಿತ್ರದುರ್ಗ ಜಿಲ್ಲೆ, ಜಿತೇಶ್ ಕಾಂಚನ್ (29) – ಮಂಜೇಶ್ವರ, ಕಾಸರಗೋಡು ಜಿಲ್ಲೆ, ಕೇರಳ,ಮುತ್ತಣ್ಣ ಅಡಿನವರ್ (32) – ಕಿತ್ತೂರು, ಬೆಳಗಾವಿ ಜಿಲ್ಲೆ , ಎಂ ಬಿ ಅವಿನಾಶ್ (24) – ಬೆಳ್ತಂಗಡಿ ತಾಲೂಕು ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.