ಬೈಂದೂರು: ಮನೆ ಹಿಂಬದಿ ಹಿತ್ತಲಲ್ಲಿ ಅಡಿಕೆ ಗಿಡ ನೆಟ್ಟ ವಿಚಾರದಲ್ಲಿ ಜಾಗಕ್ಕೆ ಅತಿಕ್ರಮ ಪ್ರವೇಶಿಸಿ ದಂಪತಿಗೆ ಹಲ್ಲೆ ನಡೆಸಿದ ಘಟನೆ ತಗ್ಗರ್ಸೆ ಗ್ರಾಮದಲ್ಲಿ ನಡೆದಿದೆ.
ತಗ್ಗರ್ಸೆ ಗ್ರಾಮದ ನಿವಾಸಿ ಚಂದ್ರಾವತಿ (68) ಅವರು ಸೆ.30ರಂದು ಬೆಳಗ್ಗೆ 9:30ಕ್ಕೆ ತಮ್ಮ ಮನೆ ಹಿಂಬದಿ ಹಿತ್ತಲಲ್ಲಿ ಅಡಿಕೆ ಗಿಡ ನೆಟ್ಟಿದ್ದರು. ಈ ವೇಳೆ 1ನೇ ಆರೋಪಿ ಕೆ.ವಿ. ಶ್ರೀಧರ ಅವರು ಫಿರ್ಯಾದಿದಾರರ ಜಾಗಕ್ಕೆ ಪ್ರವೇಶಿಸಿ ಫಿರ್ಯಾದಿದಾರರಿಗೆ ಮತ್ತು ಅವರ ಪತಿ ಗೋಪಾಲ ಶೇರಿಗಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಗೋಪಾಲ ಶೇರಿಗಾರ್ ಅವರಿಗೆ ಕೈಯಿಂದ ಹೊಡೆದಿದ್ದಾರೆ ಎಂದು ಆರೋಪ.
ಗಲಾಟೆ ಬಿಡಿಸಲು ಹೋದ ಚಂದ್ರಾವತಿ ಅವರಿಗೆ 2ನೇ ಆರೋಪಿ ಪ್ರತೀಮಾ ಅವರು ಕಲ್ಲಿನಿಂದ ಹೊಡೆದಿದ್ದು, ಬಲ ಭುಜಕ್ಕೆ ಗಾಯವಾಗಿದೆ. ಗಾಯಾಳು ಬೈಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 129/2026, ಕಲಂ 329(3), 352, 118(1) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



