Home Crime ವಿಟ್ಲ: ಕೋಳಿ ಅಂಕ ಅಡ್ಡೆಗೆ ಖಾಕಿ ದಾಳಿ : ನಾಲ್ವರು ಅರೆಸ್ಟ್…!!

ವಿಟ್ಲ: ಕೋಳಿ ಅಂಕ ಅಡ್ಡೆಗೆ ಖಾಕಿ ದಾಳಿ : ನಾಲ್ವರು ಅರೆಸ್ಟ್…!!

ವಿಟ್ಲ : ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸರಕಾರಿ ಗುಡ್ಡೆ ಪ್ರದೇಶದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಆಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.

ಅಕ್ಟೋಬರ್ 2ರಂದು ಮಧ್ಯಾಹ್ನ ಪೆರುವಾಯಿ ಗ್ರಾಮದ ಬೀಟ್ ಸಿಬ್ಬಂದಿಗೆ ದೊರೆತ ಮಾಹಿತಿಯ ಆಧಾರದ ಮೇಲೆ ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 500 ಮೀಟರ್ ಗುಡ್ಡ ಏರಿ ತೆರಳಿದ ಪೊಲೀಸರು, ಇಬ್ಬರು ವ್ಯಕ್ತಿಗಳು ಹುಂಜ ಕೋಳಿಗಳ ಕಾಲಿಗೆ ಹರಿತವಾದ ಕೋಳಿ ಬಾಳು ಕಟ್ಟಿ ಕಾದಾಟಕ್ಕೆ ಬಿಡುತ್ತಿರುವುದನ್ನು ಗಮನಿಸಿದ್ದಾರೆ. ಸುತ್ತಲೂ ಸೇರಿದ್ದವರು ಹಣ ಪಣಕ್ಕಿಟ್ಟು ಜೂಜಾಟ ನಡೆಸುತ್ತಿದ್ದರು ಎನ್ನಲಾಗಿದೆ.

ಪೊಲೀಸರನ್ನು ಕಂಡು ಕೆಲವರು ಸ್ಥಳದಿಂದ ಪರಾರಿಯಾಗಿದ್ದು, ಬೆನ್ನಟ್ಟಿ ಕೃಷಪ್ಪ ಪೂಜಾರಿ (59), ಲಕ್ಷ್ಮಣ ನಾಯ್ಕ್ (38), ಶೋಬಿತ್ ರಾಜ್ (29) ಹಾಗೂ ಯುವರಾಜ್ (46) ಎಂಬ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಿಂದ ಕೋಳಿ ಅಂಕಕ್ಕೆ ಬಳಸಿದ್ದ ₹3,050 ನಗದು, ಎರಡು ಜೀವಂತ ಹುಂಜ ಕೋಳಿಗಳು, ಎರಡು ಹರಿತವಾದ ಕೋಳಿ ಬಾಳುಗಳು ಹಾಗೂ ಒಂದು ದಾರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಎರಡು ಕೋಳಿಗಳ ಅಂದಾಜು ಮೌಲ್ಯ ₹2,000 ಎಂದು ತಿಳಿದುಬಂದಿದೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.