Home Crime ಉಪ್ಪಿನಂಗಡಿ: ಬೀಗ ಮುರಿದು ಮನೆಗೆ ನುಗ್ಗಿ 6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು….!!

ಉಪ್ಪಿನಂಗಡಿ: ಬೀಗ ಮುರಿದು ಮನೆಗೆ ನುಗ್ಗಿ 6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು….!!

ಉಪ್ಪಿನಂಗಡಿ: ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಬ್ಯಾಗ್‌ನಲ್ಲಿ ಇರಿಸಿದ್ದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾದ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ.

ಶಿರಾಡಿ ಗ್ರಾಮದ ಅಡ್ಡಹೊಳೆ, ಕಕುತ್ತಿಲ್ ಮನೆ ನಿವಾಸಿ ಶಾಲಿನಿ (52)* ಅವರ ದೂರಿನ ಪ್ರಕಾರ, ಅ.1ರಂದು ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯ ನಡುವೆ ಕಳ್ಳರು ಮನೆಯ ಹಿಂಬದಿ ಬಾಗಿಲಿನ ಬೀಗ ಬಲತ್ಕಾರವಾಗಿ ಮುರಿದು ಒಳಪ್ರವೇಶಿಸಿದ್ದಾರೆ.

ಮನೆಯೊಳಗಿನ ಬ್ಯಾಗ್‌ನಲ್ಲಿ ಇರಿಸಿದ್ದ ಒಟ್ಟು ಸುಮಾರು 75 ಗ್ರಾಂ ತೂಕದ ಚಿನ್ನದ ಬಳೆ 3, ಚಿನ್ನದ ಸರ 1, ಚಿನ್ನದ ಬ್ರಾಸ್‌ಲೈಟ್ 1 ಮತ್ತು ಚಿನ್ನದ ನೆಕ್ಲೇಸ್ 1 ಕಳವು ಮಾಡಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 129/2026, ಕಲಂ 331(4), 305 ಬಿ.ಎನ್.ಎಸ್ 2023 ರಂತೆ ಪ್ರಕರಣ ದಾಖಲಾಗಿದೆ.