Home Crime ಕಾಪು: ಸ್ನೇಹಿತನನ್ನೇ ಅಪಹರಿಸಿ ಹಲ್ಲೆ – ಯುವಕನ ವಿರುದ್ಧ ಪ್ರಕರಣ ದಾಖಲು…!!

ಕಾಪು: ಸ್ನೇಹಿತನನ್ನೇ ಅಪಹರಿಸಿ ಹಲ್ಲೆ – ಯುವಕನ ವಿರುದ್ಧ ಪ್ರಕರಣ ದಾಖಲು…!!

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪ ಸ್ನೇಹಿತನನ್ನೇ ಕಾರಿನಲ್ಲಿ ಕರೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ ಘಟನೆ ಕಾಪುವಿನಲ್ಲಿ ನಡೆದಿದೆ.

ಮಲ್ಲಾರು ಗ್ರಾಮದ ನಿವಾಸಿ ಕೆ.ಎಸ್. ಮೊಹಮ್ಮದ್ ಹಮ್ರಾಝ್ (29) ಅವರು ನೀಡಿದ ದೂರಿನ ಪ್ರಕಾರ, ಅವರ ತಮ್ಮ ನಿಹಾಲ್ ಅಹ್ಮದ್ ಅವರ ಸ್ನೇಹಿತ ಮಜೂರು ಗ್ರಾಮದ ಇಲ್ಯಾಸ್ ಹಸನಬ್ಬ ಅ.1ರಂದು ಮಧ್ಯಾಹ್ನ 2 ಗಂಟೆಗೆ KA-20-7533 ನೋಂದಣಿಯ ಸ್ವಿಫ್ಟ್ ಕಾರಿನಲ್ಲಿ ಮನೆಗೆ ಬಂದು ಮಾತನಾಡಬೇಕೆಂದು ಹೇಳಿ ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ. ಕಾರಿನಲ್ಲಿ ಕುಳಿತ ತಕ್ಷಣವೇ ಮುಖಕ್ಕೆ ಹೊಡೆದಿದ್ದಾನೆ ಎಂದು ಆರೋಪ.

ಬಳಿಕ ಹಮ್ರಾಝ್ ಅವರನ್ನು ಮಣಿಪಾಲದ Extreme Fitness Gym ಗೆ ಕರೆದೊಯ್ದು ಮೇಲಿನ ರೂಮಿನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾನೆ. ರಾತ್ರಿ 10:20ಕ್ಕೆ ಜಿಮ್‌ನಿಂದ ಕೆಳಗೆ ಕರೆತಂದು ಎದೆ, ಕಿವಿ ಮತ್ತು ಕಾಲಿಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಹಮ್ರಾಝ್ ಅವರು ತಾಯಿಗೆ ಕರೆ ಮಾಡಿ ಕಾಪು ಪೊಲೀಸ್ ಠಾಣೆಗೆ ಹೋಗುವಂತೆ ತಿಳಿಸಿ, ಉಡುಪಿಯ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅ.ಕ್ರ 125/2026, ಕಲಂ 127(2), 115(2) BNS ರಂತೆ ಪ್ರಕರಣ ದಾಖಲಾಗಿದೆ.