ಕಾರ್ಕಳ: ಪಿತೃ ಪಕ್ಷದ ಪಿಂಡ ಪ್ರದಾನಕ್ಕೆ ಬಂದಿದ್ದವರಿಗೆ ಹೊಳೆಯಲ್ಲಿ ಅಪರಿಚಿತ ಮೃತದೇಹ ಕಂಡುಬಂದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದಲ್ಲಿ ನಡೆದಿದೆ.
ಕಾರ್ಕಳ ತಾಲೂಕು ದುರ್ಗಾ ಗ್ರಾಮದ ನಿವಾಸಿ ವಿಜಯ ಸಫಲಿಗ (43) ಅವರು ಅ.2ರಂದು ಮಧ್ಯಾಹ್ನ 1 ಗಂಟೆಗೆ ಮಾಹಿತಿ ಪಡೆದು, ಊರಿನ ಜನರೊಂದಿಗೆ ದುರ್ಗಾ ಗ್ರಾಮದ ತೆಳ್ಳಾರು ಪಲಾಯಿ ಬಾಕ್ಯಾರು ಓಡದ ಕರಿಯ ಎಂಬಲ್ಲಿ ಹರಿಯುವ ದುರ್ಗಾ-ತೆಳ್ಳಾರು ಹೊಳೆ ಬಳಿ ಬಂದು ನೋಡಿದಾಗ, ಹೊಳೆಯ ನೀರಿನಲ್ಲಿ ಸುಮಾರು 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ* ಪೊದೆಯ ಕೋಲಿಗೆ ಸಿಲುಕಿ ಹಾಕಿಕೊಂಡಿರುವುದು ಕಂಡುಬಂದಿದೆ.
ಮೃತದೇಹವು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಅಥವಾ ಬೇರೆ ಕಾರಣದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಮೃತಪಟ್ಟು ಸುಮಾರು ಒಂದು ವಾರವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 51/2026, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ.



