Home Crime ಬೈಂದೂರು: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ…!!

ಬೈಂದೂರು: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ…!!

ಬೈಂದೂರು: ಉಪ್ಪುಂದ ಕಾಸನಾಡಿ ಸಮೀಪದ ಹಾಡಿಯಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಮೃತರನ್ನು ಬಿಜೂರು ನಿವಾಸಿ ರವೀಂದ್ರ ದೇವಾಡಿಗ (31) ಎಂದು ಗುರುತಿಸಲಾಗಿದೆ.

ಇವರು ಪತ್ನಿ ಹಾಗೂ ಮಗನೊಂದಿಗೆ ಪತ್ನಿಯ ಮನೆಯಲ್ಲೇ ವಾಸವಾಗಿದ್ದರು.

ಮದ್ಯ ಸೇವನೆಯ ಅಭ್ಯಾಸ ಹೊಂದಿದ್ದ ರವೀಂದ್ರ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ 15ರಂದು ಮಧ್ಯಾಹ್ನ ಸುಮಾರು 3.30ರ ವೇಳೆಗೆ ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದುಕೊಂಡು ನೇತಾಡುತ್ತಿದ್ದ ರವೀಂದ್ರ ಅವರನ್ನು ಮನೆಯವರು ಹಾಗೂ ಸ್ಥಳೀಯರು ಕೆಳಗಿಳಿಸಿ ರಿಕ್ಷಾದಲ್ಲಿ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.

ಆದರೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.