Home Crime ಮಲ್ಪೆಯಲ್ಲಿ ಕೋಳಿ ಅಂಕದ ಅಡ್ಡೆಗೆ ಖಾಕಿ ದಾಳಿ : ಐವರು ಅರೆಸ್ಟ್…!!

ಮಲ್ಪೆಯಲ್ಲಿ ಕೋಳಿ ಅಂಕದ ಅಡ್ಡೆಗೆ ಖಾಕಿ ದಾಳಿ : ಐವರು ಅರೆಸ್ಟ್…!!

ಮಲ್ಪೆ: ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಮಲ್ಪೆ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.

ಸೆಪ್ಟೆಂಬರ್ 29ರಂದು ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೀಲಕುಮಾರ್ ಡಿ. ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ತೆಂಕನಿಡಿಯೂರು ಗ್ರಾಮದ ಲಕ್ಷ್ಮಿನಗರ 2ನೇ ಕ್ರಾಸ್ ಬಳಿಯ ಮೂಡೆ ಉಗ್ಗೇದ ಸರಕಾರಿ ಹಾಡಿಯಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.

ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಕೆಲವರು ಪರಾರಿಯಾಗಿದ್ದು, ನಂದಕಿಶೋರ್, ಶುಭತ್, ಮಹೇಶ್, ಆರ್ಥಿಕ್ ಹಾಗೂ ಪಾಂಡುರಂಗ ನಾಯ್ಕ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳದಿಂದ ₹3,500 ನಗದು, 3 ಜೀವಂತ ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ್ದ 2 ಬಾಳು (ಕತ್ತಿ), 4 ಮೊಬೈಲ್ ಫೋನ್‌ಗಳು ಹಾಗೂ KA-20-EH-7511 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2026ರಂತೆ BNS ಕಲಂ 112, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87, 93 ಹಾಗೂ ಪ್ರಾಣಿ ಹಿಂಸೆ ಕಾಯ್ದೆಯ ಕಲಂ 11(1)(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.