Home Crime ಮಂಗಳೂರು: ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಯುವಕ ವಶ : ಮಾದಕ ಸೇವನೆ ದೃಢ…!!

ಮಂಗಳೂರು: ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಯುವಕ ವಶ : ಮಾದಕ ಸೇವನೆ ದೃಢ…!!

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ತೊಂದರೆ ನೀಡುತ್ತಿದ್ದ ಯುವಕನನ್ನು ಮಂಗಳೂರು ದಕ್ಷಿಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಠಾಣಾ ವ್ಯಾಪ್ತಿಯ ಹೆಚ್.ಸಿ ಪುಟ್ಟರಾಮ್ ಎಂ.ಜೆ* ಮತ್ತು ಹೆಚ್.ಸಿ ಲಕ್ಷ್ಮಣ್ ಸಾಲೋಟಗಿ ಅವರು ಸೆ. 27 ರಂದು ಮಧ್ಯಾಹ್ನ 2:30 ರಿಂದ ಪಾಂಡೇಶ್ವರ ಕಟ್ಟೆ, ಮಂಗಳಾದೇವಿ, ಬೋಳಾರ ಬಳಿ ಗಸ್ತಿನಲ್ಲಿದ್ದಾಗ, ಮಧ್ಯಾಹ್ನ 3 ಗಂಟೆಗೆ ಬೋಳಾರ ಜಂಕ್ಷನ್* ಬಳಿ ಅಪರಿಚಿತ ವ್ಯಕ್ತಿಯೊಬ್ಬ ಮಾದಕ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾನೆ ಎಂಬ ಮಾಹಿತಿ ಬಂದಿದೆ.

ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಸಮವಸ್ತ್ರದಲ್ಲಿದ್ದವರನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆತ ತನ್ನ ಹೆಸರು ಪ್ರದೀಪ್ (18 ವರ್ಷ), ತಂದೆ ದಿ. ಗುರು, ಮೈಮೂನಾ ಕಾಂಪೌಂಡ್, ಎಮ್ಮೆಕೆರೆ 1ನೇ ಕ್ರಾಸ್, ಮಂಗಳಾದೇವಿ ರಸ್ತೆ, ಬೋಳಾರ ಎಂದು ತಿಳಿಸಿದ್ದಾನೆ.

ವಿಚಾರಣೆ ವೇಳೆ ಆತನ ಮಾತು ತೊದಲುತ್ತಿದ್ದು, ಬಾಯಿಯಿಂದ ಅಮಲು ಪದಾರ್ಥ ಸೇವಿಸಿದ ವಾಸನೆ ಬರುತ್ತಿತ್ತು. ಕೂಲಂಕುಷವಾಗಿ ವಿಚಾರಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಆತನನ್ನು ಕೆ.ಎಸ್ ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದಾಗ TETRAHYDROCANNABINOL (A DERIVATIVE OF CANNABIS) / AMPHETAMINES ಮಾದಕ ವಸ್ತು ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.