Home Crime ಯುವಕನೊಬ್ಬ ಆತ್ಮಹತ್ಯೆಗೆ ಶರಣು…!!

ಯುವಕನೊಬ್ಬ ಆತ್ಮಹತ್ಯೆಗೆ ಶರಣು…!!

ಕಾರ್ಕಳ: ವ್ಯಕ್ತಿಯೊಬ್ಬರು ಸಾಲ ಮರುಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಆತ್ಮಹತ್ಯೆಗೆ ಶರಣಾದ ಯುವಕ ನಿತ್ಯಾನಂದ ಎಂದು ತಿಳಿದು ಬಂದಿದೆ.

ಘಟನೆ ವಿವರ : ಪಿರ್ಯಾದಿದಾರರಾದ ದಯಾನಂದ (55),ನಿಟ್ಟೆ ಗ್ರಾಮ, ಕಾರ್ಕಳ ಇವರ ಅಳಿಯ ನಿತ್ಯಾನಂದ (26) ಇವರು ಕಾರ್ಕಳ ಕೆ.ಇ.ಬಿ.ಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದು, ದಿನಾಂಕ 17/05/2025 ರಂದು ಬೆಳಿಗ್ಗೆ 7:30 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಬೈಕ್‌ನಲ್ಲಿ ಹೋದವರು ಕೆಲಸಕ್ಕೆ ಹೋಗಿರುವುದಿಲ್ಲವಾಗಿ ಮಾಹಿತಿ ಬಂದಂತೆ ಆತನನ್ನು ಹುಡುಕಾಡಿದಾಗ ಮನೆಯ ಸಮೀಪ ತಿರುಮಲಬೆಟ್ಟು ದಿವಾಕರ ಹಾಗೂ ಅವರ ಕುಟುಂಬದವರಿಗೆ ಸೇರಿದ ರಬ್ಬರ್‌ ತೋಟದಲ್ಲಿ ಮರದ ಗೆಲ್ಲಿಗೆ ನೈಲಾನ್‌ ಹಗ್ಗ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ನಿತ್ಯಾನಂದ ಸಾಲವನ್ನು ಮಾಡಿ ಹಣ ಪಡೆದುಕೊಂಡಿದ್ದು, ಸಾಲ ಮರುಪಾವತಿಸಲು ಸಾಧ್ಯವಾಗದೆ ಇದ್ದು, ಇದೇ ಕಾರಣದಿಂದ ಜೀವನದಲ್ಲಿ ಮನನೊಂದು ದಿನಾಂಕ 17/05/2025 ರಂದು ಬೆಳಿಗ್ಗೆ 7:30 ಗಂಟೆಯಿಂದ 10:00 ಗಂಟೆಯ ನಡುವಿನ ಅವಧಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.